Home » ಇನ್ನೆರಡು ವರ್ಷ ಜಲಪ್ರಳಯ, 5 ವರ್ಷಗಳ ತನಕ ಕೋರೋನಾ ಕಂಟಕ ಖಚಿತ | ನಿಜವಾಗಲಿದೆಯೇ ಕೋಡಿ ಸ್ವಾಮಿ ನುಡಿದ ಭವಿಷ್ಯ ?!

ಇನ್ನೆರಡು ವರ್ಷ ಜಲಪ್ರಳಯ, 5 ವರ್ಷಗಳ ತನಕ ಕೋರೋನಾ ಕಂಟಕ ಖಚಿತ | ನಿಜವಾಗಲಿದೆಯೇ ಕೋಡಿ ಸ್ವಾಮಿ ನುಡಿದ ಭವಿಷ್ಯ ?!

by ಹೊಸಕನ್ನಡ
0 comments

ಇಡೀ ವಿಶ್ವವೇ ಕೊರೋನ ಮಹಾಮಾರಿಯಿಂದ ಬಹಳಷ್ಟು ಕುಗ್ಗಿ ಹೋಗಿದೆ. ಸಾಲು ಸಾಲು ಹೆಣಗಳ ರಾಶಿ ಕಣ್ಣ ಮುಂದೆಯೇ ಸುಟ್ಟು ಬೂದಿಯಾಗಿವೆ. ಇಂತಹ ಸಂಕಷ್ಟಗಳ ನಡುವೆಯೇ ಇದೀಗ ಕೋಡಿ ಮಠದ ಸ್ವಾಮೀಜಿ ದೊಡ್ಡ ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹೌದು, ಹಲವು ಸಾವು-ನೋವುಗಳಿಂದ ಕೂಡಿದ ಜನತೆಗೆ ಇವರ ಈ ಮಾತು ಭಯ ಹುಟ್ಟಿಸುವಂತಾಗಿದೆ. ಅಷ್ಟಕ್ಕೂ ಸ್ವಾಮೀಜಿ ಬಿಚ್ಚಿಟ್ಟ ರಹಸ್ಯ ಆದರೂ ಏನು? ಮುಂದಿನ ಎರಡು ವರ್ಷಗಳಲ್ಲಿ ಜಲಪ್ರಳಯಸಂಭವಿಸಲಿದ್ದು, ಜನರು ತತ್ತರಿಸಲಿದ್ದಾರೆ ಎಂದು ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಇವರ ಮಾತಿನ ಪ್ರಕಾರ, ಕುಂಭ ರಾಶಿಯಲ್ಲಿ ಗುರು ಪ್ರವೇಶಿಸಿದರೆ ಮಳೆ ಹೆಚ್ಚು ಎಂದು ನಂಬಲಾಗುತ್ತದೆ. ಈ ಬಾರಿಯೂ ಕುಂಭ ರಾಶಿಗೆ ಗುರು ಪ್ರವೇಶಿಸಿದ್ದು, ಮಳೆ ಜಾಸ್ತಿಯಾಗಿ ಕಾರ್ತಿಕ ಮಾಸದವರೆಗೂ ನೆರೆ, ಮತ್ತಿತರ ಅಪಘಡಗಳಿಂದ ಜನ ತತ್ತರಿಸಲಿದ್ದು, ಮುಂದಿನ 5 ವರ್ಷಗಳವರೆಗೂ ಕೊರೊನಾ ಸಂಪೂರ್ಣ ನಾಶವಾಗುವುದಿಲ್ಲ ಎಂದು ಹೇಳಿದ್ದಾರೆ.

ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿ ಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದರಂತೆ. ಅದೇ ರೀತಿ ಇಂದು ಅಫ್ಗಾನಿಸ್ತಾನ ತಾಲಿಬಾನ್ ವಶವಾಗುತ್ತಿದ್ದು ನೆತ್ತರ ಕೋಡಿಯೇ ಹರಿದಿದೆ.

ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಹೇಳಿದ್ದು, ಮುಖ್ಯಮಂತ್ರಿ ಯಾವುದೇ ಅಡ್ಡಿಯಿಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಆಡಳಿತ ಮುಂದುವರೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇದೀಗ ಎಲ್ಲರಿಗೂ ಇವರ ಭವಿಷ್ಯವಾಣಿ ಆತಂಕಕ್ಕೆ ತಳ್ಳಿದಂತೂ ಸುಳ್ಳಲ್ಲ. ಆದರೆ ಇವರು ನುಡಿದಂತೆ ನಡೆಯಬಹುದೇ ಎಂಬುದನ್ನು ಕಾದು ನೋಡ ಬೇಕಿದೆ.

You may also like

Leave a Comment