Home » Kodi Mutt Shri: ʼಅರಸನ ಅರಮನೆಗೆ ಕಾರ್ಮೋಡ ಕವಿದೀತುʼ- ಕೋಡಿಮಠದ ಸ್ವಾಮೀಜಿ ಭವಿಷ್ಯ ನಿಜವಾಯ್ತು

Kodi Mutt Shri: ʼಅರಸನ ಅರಮನೆಗೆ ಕಾರ್ಮೋಡ ಕವಿದೀತುʼ- ಕೋಡಿಮಠದ ಸ್ವಾಮೀಜಿ ಭವಿಷ್ಯ ನಿಜವಾಯ್ತು

0 comments
Kodi Mutt Shr

Kodi Mutt Swamiji Prediction: ಕೋಡಿಮಠ ಸ್ವಾಮೀಜಿ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಎರಡು ತಿಂಗಳ ಹಿಂದೆ “ಅರಸನ ಅರಮನೆಗೆ ಕಾರ್ಮೋಡ ಕವಿದೀತು” ಎನ್ನುವ ಭವಿಷ್ಯವನ್ನು ಹೇಳಿದ್ದರು. ಇದೀಗ ಈ ಕುರಿತು ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ” ಕೇಂದ್ರದಲ್ಲಿ ಉಪರಾಷ್ಟ್ರಪತಿ ರಾಜೀನಾಮೆ ನೀಡಿದ್ದಾರೆ, ರಾಜ್ಯದಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ರಾಜೀನಾಮೆ ನೀಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.

ನಾವು ಯುಗಾದಿ ಮತ್ತು ಸಂಕ್ರಾಂತಿಯಲ್ಲಿ ಭವಿಷ್ಯ ನುಡಿಯುತ್ತೇವೆ. ರಾಜಕೀಯದಲ್ಲಿ ಕಾರ್ಮೋಡ ಇದೆ. ಇದು ರಾಜಕೀಯ ಅನಿಶ್ಚಿತತೆಯನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.

ಸಮಾಚಾರ, ಪ್ರಚಾರ, ವಿಚಾರ, ಅಪಪ್ರಚಾರ-ಇವುಗಳಲ್ಲಿ ಅಪಪ್ರಚಾರವೇ ಪ್ರಬಲವಾಗಿದೆ. ದುರ್ಧೈವವೆಂದರೆ ಅಪಪ್ರಚಾರವು ಕೊನೆಗೆ ಬರಬೇಕು. ಆದರೆ ಇಂದು ಮೊದಲಿಗೆ ಬಂದಿದೆ. ಸತ್ಯ ಹೊರಬರಲು ಕಾಲಾವಕಾಶ ಬೇಕು. ಅಳಕು ಹೃದಯದವನಿಗೆ ಅಪಪ್ರಚಾರವೇ ಆಯುಧವಾಗಿದೆ. ಸತ್ಯವನ್ನು ಒಪ್ಪಿಕೊಳ್ಳಲು ಧೈರ್ಯ ಬೇಕು ಎಂದು ಧರ್ಮಸ್ಥಳದ ಕುರಿತು ಹೇಳಿದ್ದಾರೆ.

ಒಳ್ಳೆಯ ದೇವರ ಗುಡಿಗಳ ಪೂಜೆ ನಿಂತುಬಿಡುತ್ತದೆ. ಹಣೆಗೆ ವಿಭೂತಿ ಇಟ್ಟುಕೊಂಡು, ಹಣೆಯನ್ನೇ ಕೆತ್ತಿಕೊಳ್ಳುವವರು ಇದ್ದಾರೆ, ನಾಮವಿಟ್ಟರೆ ಅಳಿಸ್ಯಾರು. ಧರ್ಮಕ್ಕೆ ಅವಮಾನ ಮಾಡುವ ಕಾಲ ಬಂದಿದೆ. ಇದನ್ನು ಧೈರ್ಯವಾಗಿ ಎದುರಿಸಿ, ಧರ್ಮವನ್ನು ಉಳಿಸಿಕೊಳ್ಳಬೇಕು” ಎಂದು ಕರೆ ನೀಡಿದ್ದಾರೆ.

You may also like