Home » Heart attack: ಕೊಕ್ಕಡ: ಚಲಿಸುತ್ತಿದ್ದ ಆಟೋದಲ್ಲಿ ಹೃದಯಾಘಾತ: ಯುವಕ ಮೃತ್ಯು!

Heart attack: ಕೊಕ್ಕಡ: ಚಲಿಸುತ್ತಿದ್ದ ಆಟೋದಲ್ಲಿ ಹೃದಯಾಘಾತ: ಯುವಕ ಮೃತ್ಯು!

0 comments

Heart attack: ಕೊಕ್ಕಡ ಸಮೀಪದ ಕೆಂಪಕೋಡಿನ ನಿವಾಸಿ ರಘುರಾಮ ಮಡಿವಾಳ ಅವರ ಪುತ್ರ ಶರತ್ ಕುಮಾರ್ ಕೆ (36) ಅವರು ತಮ್ಮ ಆಟೋ ರಿಕ್ಷಾ ಓಡಿಸುತ್ತಿರುವಾಗಲೇ ಹೃದಯಾಘಾತವಾಗಿ (Heart attack) ಮೃತಪಟ್ಟಿರುವ ದುರ್ಘಟನೆ ಇಂದು ಸಂಭವಿಸಿ.

ಶರತ್ ಕುಮಾರ್ ಅವರು ಪ್ರತಿದಿನದಂತೆ ಇಂದು( ಜೂ.3) ಬೆಳಿಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ బిట్టు ಮರುಪಯಣದಲ್ಲಿ ಅಕಾಲಿಕವಾಗಿ ಆಟೋ ರಿಕ್ಷಾ ಚಲಾಯಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧನರಾದರು.

You may also like