Home » Miyazaki mango: ಮತ್ತೆ ಕಮಾಲ್ ಮಾಡಿದ ಸೆಲೆಬ್ರಿಟಿ ಮಾವು ‘ಮಿಯಾಝಾಕಿ’: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು

Miyazaki mango: ಮತ್ತೆ ಕಮಾಲ್ ಮಾಡಿದ ಸೆಲೆಬ್ರಿಟಿ ಮಾವು ‘ಮಿಯಾಝಾಕಿ’: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು

0 comments
Miyazaki mango

Miyazaki mango: ಕೋಲ್ಕತ್ತಾ: ವಿಶ್ವದ ಅತ್ಯಂತ ದುಬಾರಿ, ಜಪಾನ್ ಮೂಲದ ಮಾವು ಎಂದೇ ಖ್ಯಾತಿ ಪಡೆದಿರುವ ಮಿಯಾಝಾಕಿ (Miyazaki mango) ಮಾವು ಮತ್ತೊಮ್ಮೆ ಕಮಾಲ್ ಸೃಷ್ಟಿಸಿದೆ. ಈ ಸೆಲೆಬ್ರಿಟಿ ‘ಮಿಯಾಝಾಕಿ’ ಪಶ್ಚಿಮಬಂಗಾಳ (West Bengal) ದಲ್ಲಿ ಕೆ.ಜಿಗೆ 2.75 ಲಕ್ಷ ರೂ. ನೀಡಿ
ಖರೀದಿಸಲಾಗಿದೆ.

ಪಶ್ಚಿಮ ಬಂಗಾಳದ ಸಿರಿಗುರಿ ಎಂಬಲ್ಲಿಯ ಮಾಡೆಲ್ಲಾ ಕೇರ್ ಟೇಕರ್ ಸೆಂಟರ್ ಮತ್ತು ಶಾಲೆಯೊಂದರಲ್ಲಿ ಪ್ರವಾಸೋದ್ಯಮ ಸಂಸ್ಥೆ ಸಹಯೋಗದೊಂದಿಗೆ ಮೂರು ದಿನಗಳ ಮಾವು ಉತ್ಸವ ಆಯೋಜಿಸಲಾಗಿದೆ. ಅಲ್ಲಿ ಇತರ ಮಾವುಗಳ ಜತೆ ಮಿಯಾಝಾಕಿ ಎಂಬ ತಳಿಯ ಮಾವಿನ ಹಣ್ಣುಗಳನ್ನೂ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಡಲಾಗಿದೆ. ‘ಸೂರ್ಯನ ಮೊಟ್ಟೆ’ ಎಂದೂ ಕರೆಯಲ್ಪಡುವ ಈ ಹಣ್ಣು ಈಗ ದಾಖಲೆಯ ಮೊತ್ತಕ್ಕೆ ಮಾರಾಟ ಆಗಿದೆ.

ಆ ಮಾವು ಪ್ರದರ್ಶನ ಮಳಿಗೆಯಲ್ಲಿ 262 ಬಗೆಯ ಥರಾವರಿ ಬಗೆಯ ಬಣ್ಣದ ಆಕಾರದ ಮಾವುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಇದರಲ್ಲಿ ಮಿಯಾಝಾಕಿಯೇ ಪ್ರಮುಖ ಆಕರ್ಷಣೆಯಾಗಿತ್ತು. ಮಿಯಾಝಾಕಿ ಮಾವು ಇವತ್ತು ಅಲ್ಲಿ ಸೆಲೆಬ್ರಿಟಿ ಸ್ಟೇಟಸ್ ಪಡೆದುಕೊಂಡಿತ್ತು. ಈ ಮಾವಿನ ಮಾರಾಟಕ್ಕೆ ಇಟ್ಟಿದ್ದ ಮಾಲೀಕರು ಕೂಡಾ ಸೆಲೆಬ್ರಿಟಿ ಥರ ಅನ್ನಿಸಿದ್ದರು. ನೂರಾರು ಗ್ರಾಹಕರು ಹಲವು ಮಾಹಿತಿಗಳನ್ನು ಪಡೆದು ಕೆಲವರು ಮಿಯಾಝಾಕಿಯನ್ನು ಲಕ್ಷಗಟ್ಟಲೆ ಬೆಲೆ ತೆತ್ತು ಹೆಮ್ಮೆಪಟ್ಟಿದ್ದಾರೆ.

ತನ್ನ ವಿಭಿನ್ನ ಆಕಾರ ಹಾಗೂ ವಿಶಿಷ್ಟ ಬಣ್ಣದಿಂದ ಬೇರೆ ಮಾವಿಗಿಂತ ಈ ಮಾವು ಹೆಚ್ಚು ಆಕರ್ಷಿತವಾಗಿ ಕಾಣುತ್ತದೆ. ನೇರಳೆ ಬಣ್ಣದ ಈ ಹಣ್ಣನ್ನು ಜಪಾನ್‍ನ ಕ್ಯೂಶು ಪ್ರಾಂತ್ಯದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ಜಪಾನ್‍ (Japan) ನಲ್ಲಿ ಇದು ಸ್ಥಳೀಯ ಹಣ್ಣಿನ ತಳಿಯಾಗಿದ್ದು, ಏಪ್ರಿಲ್‍ನಿಂದ ಆಗಸ್ಟ್ ನಲ್ಲಿ ಬೆಳೆಯಲಾಗುತ್ತದೆ.

ಈ ಹಣ್ಣು ಯಾಕಿಷ್ಟು ದುಬಾರಿ ಗೊತ್ತೇ? ಮೊದಲನೆಯದಾಗಿ ಈ ಹಣ್ಣು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬೆಳೆಯುತ್ತದೆ. ಬೆಳೆದಂತೆ ಹಲವು ಬಣ್ಣಗಳ ರೂಪಾಂತರ ಪಡೆದುಕೊಳ್ಳುತ್ತದೆ ಈ ಹಣ್ಣು. ಕಾಯಿ ಇರುವಾಗ ನೇರಳೆ ಬಣ್ಣದಲ್ಲಿ ಇರುವ ಈ ಹಣ್ಣು, ಮಾಗಿ ಹಣ್ಣಾದಾಗ ಗೋಲ್ಡನ್ ಬಣ್ಣಕ್ಕೆ ತಿರುಗಿ ಮಿರುಗುತ್ತದೆ. ಸೂರ್ಯನ ಪ್ರಭೆಯನ್ನು ಪಡೆದುಕೊಳ್ಳುವ ಕಾರಣಕ್ಕೆ ಈ ಹಣ್ಣಿಗೆ ಸೂರ್ಯನ ಮೊಟ್ಟೆ ಎಂದೂ ಕರೆಯುತ್ತಾರೆ.

ವಿಭಿನ್ನ ರುಚಿ, ವಿಶಿಷ್ಟ ಔಷಧೀಯ ಗುಣಗಳು ಈ ಹಣ್ಣಿನ ಇನ್ನೂ ಕೆಲವು ಸ್ಪೆಶಾಲಿಟಿಗಳು. ಈ ಹಣ್ಣು ರೋಗ ನಿರೋಧಕ ಅಂಶಗಳನ್ನೂಹೊಂದಿದ್ದು ಇವುಗಳಲ್ಲಿ ಬೆಟಾ ಕೆರೋಟಿನ್, ಫೋಲಿಕ್ ಆಸಿಡ್ ಹೆಚ್ಚಿದ್ದು ಅವು ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗಿದೆ. ಅಲ್ಲದೆ ಕಣ್ಣಿನ ದೃಷ್ಟಿ ಕಳಕೊಳ್ಳುತ್ತಿರುವವರಿಗೂ ಇದು ಸಹಾಯಕಾರಿಯಂತೆ.

 

 

ಇದನ್ನು ಓದಿ: Bangalore: ಮೈ ಮಾಂಸ ಮಾರಾಟ ಮಾಡುತ್ತಿದ್ದ 24 ಯುವತಿಯರು, 9 ಮಂದಿ ಅರೆಸ್ಟ್

You may also like

Leave a Comment