Home » Kolluru: ಕಾಯಿ ಕೀಳುವಾಗ ತೆಂಗಿನ ಮರದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು

Kolluru: ಕಾಯಿ ಕೀಳುವಾಗ ತೆಂಗಿನ ಮರದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು

0 comments

Kolluru: ತೆಂಗಿನ ಮರದಿಂದ ಕಾಯಿ ಕೀಳುವ ಸಂದರ್ಭದಲ್ಲಿ ವ್ಯಕ್ತಿಯೋರ್ವರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಗ್ಗಡೆಹಕ್ಲುವಿನಲ್ಲಿ ನಡೆದಿದೆ.

ಮೃತರನ್ನು ಬೈಂದೂರಿನ ಕಾಲ್ತೋಡು ಗ್ರಾಮದ ರಾಮ ಎಂದು ಗುರುತಿಸಲಾಗಿದೆ. ವಾರದ ಹಿಂದೆ  ತಮ್ಮ ಪುತ್ರಿ ಜ್ಯೋತಿ ಅವರ ಕೃಷಿ ಕೆಲಸಕ್ಕೆಂದು  ಹೆಗ್ಗಡೆಹಕ್ಲುಗೆ ಇವರು ಬಂದಿದ್ದರು. ತೆಂಗಿನ ಮರದಲ್ಲಿ ಕಾಯಿ ಕೀಳುವಾಗ ಕಾಯಿಯೊಂದು ಅವರ ತಲೆಯ ಮೇಲೆ ಬಿದ್ದಿದೆ. ಇದರಿಂದ ರಾಮ ಅವರು ಮರದಿಂದ ಆಯತಪ್ಪಿ ಕೆಳಗೆ ಬಿದ್ದಿದ್ದು, ಬಿದ್ದ ರಭಸಕ್ಕೆ ಅವರ ತಲೆಗೆ ಗಾಯವಾಗಿದೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪರೀಕ್ಷೆ ಮಾಡಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like