Home » Kokkada: ‘ಕೈಲಾದಷ್ಟು ಕಾಂಕ್ರೀಟ್ ಕಲಸು ‘ – ಕೊಕ್ಕಡದಲ್ಲಿ ಸ್ವತಃ ರೋಡ್ ರಿಪೇರಿಗೆ ಇಳಿದ KPM ಗೆಳೆಯರು !

Kokkada: ‘ಕೈಲಾದಷ್ಟು ಕಾಂಕ್ರೀಟ್ ಕಲಸು ‘ – ಕೊಕ್ಕಡದಲ್ಲಿ ಸ್ವತಃ ರೋಡ್ ರಿಪೇರಿಗೆ ಇಳಿದ KPM ಗೆಳೆಯರು !

0 comments
Kokkada

Kokkada: ಹಲವು ಜನರು ಕೂಡಿದರೆ ಉತ್ತಮ ಕಾರ್ಯ ನೆರವೇರುತ್ತದೆ ಎನ್ನುವ ಹಾಗೆ ಇದೀಗ ಕೊಕ್ಕಡದಲ್ಲಿ ಸ್ವತಃ ಜನರು ರಸ್ತೆಗೆ ಇಳಿದಿದ್ದಾರೆ. ಕೊಕ್ಕಡದ ಯುವಕರು (Kokkada) KPM ಗೆಳೆಯರು ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದಾರೆ. ಹೌದು, KPM ಗೆಳೆಯರು ಸ್ವತಃ ರೋಡ್ ರಿಪೇರಿಗೆ ಇಳಿದಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

KPM ಫ್ರೆಂಡ್ಸ್ ಇವತ್ತು ಸಂಜೆ ಪಟ್ಟೂರುನಿಂದ ಕೊಕ್ಕಡ ತನಕ ಡಾಮರು ರೋಡ್ ನಲ್ಲಿರುವ ಗುಂಡಿಗಳಿಗೆ ಕಾಂಕ್ರೀಟ್ ಹಾಕುವ
ಕೆಲಸ ಮಾಡಿದ್ದಾರೆ. ಕೈಲಾದಷ್ಟು ಕೆಲಸ ಮಾಡು, ‘ಕೈಲಾದಷ್ಟು ಕಾಂಕ್ರೀಟ್ ಕಲಸು’ ಎಂಬಂತೆ ತಾವೇ, ತಮ್ಮ ಕೈಲಾದಷ್ಟು ಗುಂಡಿಗಳಲ್ಲಿ ತಮಗಾಗುವಷ್ಟು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಕೆಲವು ತುಂಬಾ ಅಪಾಯಕಾರಿ ಗುಂಡಿಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ.

ಯಾಕೆಂದರೆ, ವಾಹನಗಳಲ್ಲಿ ಸಂಚರಿಸುವ ವೇಳೆ ರಸ್ತೆಯಲ್ಲಿರುವ ಗುಂಡಿಗಳಿಂದ ಅಪಘಾತಗಳು ಆಗುವ ಸಂಭವ ಹೆಚ್ಚು. ಹಾಗೆಯೇ ಈ ಉತ್ತಮ ಕಾರ್ಯಕ್ಕೆ ಕೈ ಜೋಡಿಸಲು ಬಯಸುವವರು 9901732536 ನಂಬರ್ ಗೆ ಮೆಸೇಜ್ ಮಾಡಬಹುದು ಎಂದು ತಿಳಿಸಲಾಗಿದೆ.

ಇದನ್ನು ಓದಿ: Viral video: ಹಲ್ಲಿಲ್ಲದ, ಬಚ್ಚು ಬಾಯಿ ಮುದಕನೊಂದಿಗೆ ಹರೆಯದ ಸುಂದರಿ ಮದುವೆ – ಫುಲ್ ಖುಷಿಯಾಗಿ ಈ ಅಜ್ಜಯ ಏನು ಮಾಡ್ದ ಗೊತ್ತಾ ?!

You may also like

Leave a Comment