KRS: ಕೃಷ್ಣರಾಜ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ದದ ಅಭಿಪ್ರಾಯಗಳು ಕೇಳಿಬರುತ್ತಿವೆ.
ಈ ನಡುವೆ “ಕೆಆರ್‌ಎಸ್ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ದೂರದೃಷ್ಟಿಯ ಫಲವೋ ಅಥವಾ ಟಿಪ್ಪು ಸುಲ್ತಾನ್ ಅವರ ಆರಂಭಿಕ ಯೋಜನೆಯೋ?” ಎಂಬ ಪ್ರಶ್ನೆ ಮೂಡಿದೆ. ಕಾರಣ ಆ ಒಂದು ಶಾಸನ. ಡ್ಯಾಂನ ಪಶ್ಚಿಮ ದ್ವಾರದಲ್ಲಿ ಅಳವಡಿಸಲಾದ ಈ ಶಾಸನಗಳಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರದ ಕೆಳಭಾಗದಲ್ಲಿ ಮೂರು ಶಿಲಾಲಿಖಿತ ಕಲ್ಲುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅವುಗಳಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಬರೆಯಲಾಗಿದೆ.
ಈ ಶಾಸನಗಳಲ್ಲಿ, 1794ರಲ್ಲಿ ಟಿಪ್ಪು ಸುಲ್ತಾನ್ ಅವರು ‘ಮೋಹಿ ಡ್ಯಾಂ’ ಹೆಸರಿನಲ್ಲಿ ಒಂದು ಅಣೆಕಟ್ಟು ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬ ಉಲ್ಲೇಖವಿದೆ. ಇದು ಕೆಆರ್‌ಎಸ್ ಅಣೆಕಟ್ಟಿಗೆ ಅಡಿಗಲ್ಲು ಹಾಕಲಾದ 117 ವರ್ಷಗಳ ಹಿಂದಿನದ್ದಾಗಿದೆ ಎನ್ನಲಾಗಿದೆ. ಅಲ್ಲದೆ, “ರಾಜಧಾನಿಯ ಪಶ್ಚಿಮ ದಿಕ್ಕಿಗೆ ಮೋಹಿ ಡ್ಯಾಂ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ” ಎಂಬ ಉಲ್ಲೇಖವೂ ಆ ಶಾಸನಗಳಲ್ಲಿ ಕಾಣುತ್ತದೆ. ಈ ಶಾಸನಗಳನ್ನು ಕೆಆರ್‌ಎಸ್ ಡ್ಯಾಂದ ಮುಖ್ಯದ್ವಾರದಲ್ಲಿ ಅಳವಡಿಸಿದ್ದು ಯಾವ ಸಮಯದಲ್ಲಿ ಎಂಬುದರ ಕುರಿತು ಸ್ಪಷ್ಟತೆ ಇಲ್ಲ.ಆ ಶಾಸನಗಳಿಗೂ ಕನ್ನಂಬಾಡಿ ಅಣೆಕಟ್ಟೆಗೂ ಸಂಬಂಧ ಇದಿಯಾ? ಎಂಬ ಬಗ್ಗೆ ಕೂಡ ಸ್ಪಷ್ಟತೆ ಇಲ್ಲ.
ಇನ್ನು ಸಚಿವ ಮಹದೇವಪ್ಪನವರ ಹೇಳಿಕೆಯ ನಂತರ ಅಡಿಗಲ್ಲಿನಲ್ಲಿ ಕನ್ನಂಬಾಡಿ ಅಣೆಕಟ್ಟೆ ಅಥವಾ ಟಿಪ್ಪು ಸುಲ್ತಾನ್ ಕುರಿತಾದ ಯಾವುದೇ ಉಲ್ಲೇಖವೇ ಇಲ್ಲ. ಬದಲಿಗೆ, ಅದರಲ್ಲಿರುವ ಲಿಪಿಯಲ್ಲಿ ಇರಾನ್ ದೇಶದ ಸಿಹಿ ಗೆಣಸು (ಶಕ್ಕರ್) ಮಾರಕಟ್ಟೆಯ ಕುರಿತು ಉಲ್ಲೇಖವಿದೆ. ಆ ಅಡಿಗಲ್ಲಿಗೂ ಕೆಆರ್‌ಎಸ್ ಡ್ಯಾಂಗೂ ಯಾವುದೇ ಸಂಬಂಧ ಇಲ್ಲ. ಮೈಸೂರು ಒಡೆಯರ್ ಅವರ ಹೆಸರು ಮರೆಮಾಚಲು ಪರ್ಷಿಯನ್ ಅಡಿಗಲ್ಲು ಹಾಕಲಾಗಿದೆ. ಕೂಡಲೇ ಆ ಅಡಿಗಲ್ಲು ತೆರವುಗೊಳಿಸಬೇಕೆಂದು ಒಂದು ವರ್ಷದ ಹಿಂದೆಯೇ ಜಿಲ್ಲಾಧಿಕಾರಿಗೆ ಬಿಜೆಪಿ ಕಾರ್ಯಕರ್ತ ಸಿ.ಟಿ.ಮಂಜು ಮನವಿ ನೀಡಿದ್ದರು. ಸ್ಥಳೀಯರು ಆ ಅಡಿಗಲ್ಲಿನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದ್ದು, ಅದು ಕೇವಲ ಮೈಸೂರು ಒಡೆಯರ್‌ಗಳ ಭೂಮಿಕೆಯನ್ನು ಮರೆಮಾಡುವ ಉದ್ದೇಶದಿಂದ ಹಾಕಲಾಗಿದೆ ಎಂದು ಸ್ಥಳೀಯ ನಾಗರಿಕರು ಮತ್ತು ಸಂಸ್ಕೃತಿಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಇತಿಹಾಸ ತಜ್ಞರು ಹೇಳೋದೇನು?
ಕನ್ನಡ, ಇಂಗ್ಲೀಷ್ ಹಾಗೂ ಪರ್ಶಿಯನ್ ಭಾಷೆಯಲ್ಲಿರುವ ಶಿಲಾಫಲಕ. ಈ ಶಾಸನಗಳ ಪ್ರಕಾರ, 1794ರಲ್ಲಿ ಟಿಪ್ಪು ಸುಲ್ತಾನ್ ‘ಮೋಹಿ ಡ್ಯಾಂ’ ಹೆಸರಿನಲ್ಲಿ ಒಂದು ಅಣೆಕಟ್ಟಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬ ಮಾಹಿತಿ ದೊರೆಯುತ್ತದೆ. ಇದರೊಂದಿಗೆ, ಅವರು ಅಣೆಕಟ್ಟು ನಿರ್ಮಿಸುವ ಕನಸು ಹೊಂದಿದ್ದರು ಎನ್ನುವ ವಿವರಣೆಗೂ ಬಲಬಂದಿದೆ.ಟಿಪ್ಪು ಸುಲ್ತಾನ್ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಇತ್ತ, ನಿಜವಾದ ಕೆಆರ್‌ಎಸ್ ಡ್ಯಾಂದ ನಿರ್ಮಾಣವು 1910-11ರ ಅವಧಿಯಲ್ಲಿ ಮೈಸೂರಿನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರ ತಾಂತ್ರಿಕ ನಿರ್ದೇಶನದಲ್ಲಿ ಪ್ರಾರಂಭವಾಯಿತು. ಆದರೆ ಕೆಆರ್‌ಎಸ್‌ಗೂ ಟಿಪ್ಪುಗೂ ಯಾವುದೇ ಸಂಬಂಧ ಇಲ್ಲ. ಟಿಪ್ಪು ಕನಸಿನ ಬಗ್ಗೆ ತಿಳಿದು ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಲಾಫಲಕ ಅಳವಡಿಸಿ ಉದಾರತೆ ಮೆರೆದದ್ರು ಅನ್ನೋ ಬಗ್ಗೆ ಇತಿಹಾಸ ತಜ್ಞರ ಮಾಹಿತಿ.
?
