Home » ಕೆಎಸ್ಸಾರ್ಟಿಸಿ ಬಸ್-ಲಾರಿ ನಡುವೆ ಅಪಘಾತ | ನಾಲ್ವರಿಗೆ ಗಾಯ

ಕೆಎಸ್ಸಾರ್ಟಿಸಿ ಬಸ್-ಲಾರಿ ನಡುವೆ ಅಪಘಾತ | ನಾಲ್ವರಿಗೆ ಗಾಯ

by Praveen Chennavara
0 comments

ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಚೆರ್ವತ್ತೂರು ಸಮೀಪ ಶುಕ್ರವಾರ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ – ಲಾರಿ ನಡುವೆ ಉಂಟಾದ ಅಪಘಾತ ದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಕಣ್ಣೂರು ಕಡೆಯಿಂದ ಕಾಣ೦ಗಾಡ್ ಗೆ ಹೋಗುತ್ತಿದ್ದ ಬಸ್ ಮತ್ತು ಮಧ್ಯಪ್ರದೇಶದಿಂದ ಕಣ್ಣೂರು ಕಡೆಗೆ ಬರುತ್ತಿದ್ದ ಸರಕು ಲಾರಿ ನಡುವೆ ಅಪಘಾತ ನಡೆದಿದೆ.

ಲಾರಿಯಲ್ಲಿ ಸಿಲುಕಿದ್ದ ಚಾಲಕ ರಾಜೇಶ್ ಎಂಬವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದರು.

ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಅಪಘಾತದ ಬಳಿಕ ಒಂದು ಗಂಟೆಗೂ ಅಧಿಕ ಹೊತ್ತು ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು.

You may also like

Leave a Comment