Home » ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಗ್ರಾಮ ಒನ್ ಕೇಂದ್ರಗಳ ಮೂಲಕ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ಅವಕಾಶ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಗ್ರಾಮ ಒನ್ ಕೇಂದ್ರಗಳ ಮೂಲಕ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ಅವಕಾಶ

0 comments

ವಿದ್ಯಾರ್ಥಿಗಳಿಗೆ ಕೆಎಸ್‍ಆರ್ ಟಿಸಿ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.

ಸರ್ಕಾರದ ಆದೇಶದಂತೆ ಗ್ರಾಮ ಒನ್ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಒಟ್ಟು 768 ಸೇವೆಗಳನ್ನು ನೀಡಲಾಗುತ್ತಿದೆ. ಇದೀಗ ಅದರಲ್ಲಿ ಬಸ್ ಪಾಸ್ ಸೇವೆಯನ್ನು ನೀಡಲು ಪ್ರಾರಂಭಿಸಿದೆ.

ವಿದ್ಯಾರ್ಥಿಗೆ ಬಸ್ ಪಾಸ್‍ಗೆ ಅಗತ್ಯ ದಾಖಲೆ, ಶೈಕ್ಷಣಿಕ ಸಂಸ್ಥೆ ಕೆಎಸ್‍ಆರ್ ಸಿಟಿ ಬಸ್ ಪಾಸ್‍ನಿಂದ ಘೋಷಣೆ ಪ್ರಮಾಣಪತ್ರ, ಆಧಾರ್ ಕಾರ್ಡ್, ಶುಲ್ಕ ಪಾವತಿಸಿದ ರಸೀದಿ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಎಸ್‍ಸಿಎಸ್‍ಟಿ ಪ್ರಮಾಣ ಪತ್ರ(ಅನ್ವಯಿಸಿದರೆ) ಈ ದಾಖಲೆಗಳೊಂದಿಗೆ ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಈ ಮೂಲಕ ಬಸ್‍ಪಾಸ್ ಅಪೇಕ್ಷಿಸುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಲು ಕೋರಿದೆ.

You may also like

Leave a Comment