Accident: ಕೊಡಗಿನಲ್ಲಿ ಮಳೆ ಶುರುವಾಗಿದ್ದಲ್ಲಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ರಸ್ತೆಗಳಲ್ಲಿ ಚಾಲಕನ ನಿಯಂತ್ರಣ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಮಳೆ ಹೆಚ್ಚಾಗಿರುವ ಹಿನ್ನೆಲೆ ವಾಹನಗಳು ತಮ್ಮ ಕಂಟ್ರೋಲ್ ಕಳೆದುಕೊಳ್ಳುತ್ತಿದೆ. ಹೀಗಾಗಿ ಬಸ್ ಹಾಗೂ ಇತರ ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗಿದೆ.
ಆರಂತೋಡು ಬಳಿ ಮಂಗಳೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಬಸ್ ಬರೆಗೆ ಗುದ್ದಿದು, ವಿರಾಜಪೇಟೆ ಕಾವೇರಿ ಕಾಲೇಜು ಬಳಿ ಕಾಫಿ ತೋಟಕ್ಕೆ ನುಗ್ಗಿದ ಬಸ್ಸು, ಸೋಮವಾರಪೇಟೆ ತಾಲ್ಲೂಕಿನಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬ ಆಸರೆ ಪಡೆದದ್ದು, ರಾಷ್ಟ್ರೀಯ ಹೆದ್ದಾರಿ 275ಯಲ್ಲಿ ಸಿಂಕೋನ, ಬೋಕೇರಿ, ಸುಂಟಿಕೊಪ್ಪ, ಸಂಪಿಗೆಕಟ್ಟೆ ಬಳಿ ಕಳೆದ ಒಂದು ವಾರ-15 ದಿನಗಳಲ್ಲಿ ಜಿಲ್ಲೆಯ ಒಂದಲ್ಲ ಒಂದು ಭಾಗದಲ್ಲಿ ಕೆಂಪು ಬಸ್ ಗಳು ರಸ್ತೆಯಿಂದ ಕೆಳಗೆ ನಿಂತಿರುವುದು ಕಂಡು ಬರುತ್ತಿದೆ.
ತಿರುವು ಇರುವ ರಸ್ತೆಗಳಲ್ಲಿ ಸಾಮಾನ್ಯವಾಗಿ ಕೊಡಗು ಜಿಲ್ಲೆಯ ಮಾರ್ಗವಾಗಿ ಮಂಗಳೂರು ಮತ್ತು ಹಾಸನದ ಕಡೆಗೆ ತೆರಳುವ ಬಸ್ಸುಗಳು ತಿರುವುಗಳಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಈಡಾಗುತ್ತಿದೆ, ಸಿಂಗಲ್ ರೋಡ್ ಗಳಲ್ಲಿ ಅಕ್ಕ ಪಕ್ಕದಲ್ಲಿ ಕಾಡು ಬೆಳೆದು ಅನಾಹುತ ಸಂಭವಿಸಿರಬಹುದು ಎನ್ನಬಹುದು ಆದರೆ ಹೆದ್ದಾರಿಯಲ್ಲಿ ಸಂಭವಿಸುವ ಅವಘಡಗಳಿಗೆ ಬಯಲು ಸೀಮೆಗಳಲ್ಲಿ ಬಸ್ ಚಲಾಯಿಸಿ ಹೆಚ್ಚು ಅನುಭವ ಇರುವ ಉತ್ಸಾಹಿ ಯುವ ಚಾಲಕರಿಗೆ ಘಾಟ್ ಭಾಗದಲ್ಲಿ ಓಡಿಸುವುದು ಕಷ್ಟವಾಗುತ್ತಿರುವುದಕ್ಕೆ ಕಾರಣ ಇರಬಹುದು, ಮತ್ತೊಂದೆಡೆ ಬಸ್ಸಿನ ಗುಣಮಟ್ಟವೂ ಇಲ್ಲಿ ಗಮನರ್ಹ. ಒಟ್ಟಿನಲ್ಲಿ ಈ ಅವಘಡ ಗಳು ಹೆಚ್ಚಿನ ಅನಾಹುತ ಮಾಡದೇ ಇರುವುದು ಸಮಾಧಾನದ ವಿಚಾರ.
