KSRTC : ಬಸ್ಸುಗಳಲ್ಲಿ, ರೈಲುಗಳಲ್ಲಿ ಕುರಿ, ಕೋಳಿ, ನಾಯಿ ಮರಿಗಳನ್ನು ಕೊಂಡು ಹೋಗುವಾಗ ಅವುಗಳಿಗೆ ಟಿಕೆಟ್ ವಿಧಿಸುವುದನ್ನು ನೋಡಿದ್ದೇವೆ. ಆದರೆ ಇದೀಗ ಇಲ್ಲೊಂದೆಡೆ ಬಸ್ನಲ್ಲಿ ಬೆಕ್ಕಿನ ಮರಿಯನ್ನು ಕೊಂಡು ಹೋಗಿದ್ದಕ್ಕೆ ಕಂಡಕ್ಟರ್ ಅದಕ್ಕೆ ಆಫ್ ಟಿಕೇಟ್ ಕೊಟ್ಟಿದ್ದಾರೆ.
ಹೌದು, ಮೈಸೂರು – ಮಡಿಕೇರಿಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಕ ತನ್ನ ಜೊತೆ ಬೆಕ್ಕಿನ ಮರಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಿರ್ವಾಹಕ ಬೆಕ್ಕಿನ ಮರಿಗೂ ಆಫ್ ಟಿಕೆಟ್ ನೀಡಿದ್ದಾರೆ.
ಬಸ್ಸಲ್ಲಿ ಹೋಗುವಾಗ ಪ್ರಯಾಣಿಕರು ಒಬ್ಬರು ಬೆಕ್ಕಿನ ಮರಿಯನ್ನು ಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಕಂಡಕ್ಟರ್, ಅದು ಬೆಕ್ಕಿನ ಮರಿನೆ ಆಗಲಿ ಮಕ್ಕಳೆ ಆಗಲಿ ಆಫ್ ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಈಗ ಬೆಕ್ಕಿಗೆ ಕ್ಯಾಟ್ ಪಾಸ್ ಮಾಡಬೇಕಾ. ಅದು ಅಲ್ಲದೆ ದುಡ್ಡು ತೆಗೆದು ಸೀಟು ಕೂಡಾ ಕೊಟ್ಟಿಲ್ಲ. ಇದು ನ್ಯಾಯನಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೂ ಟ್ಯಾಗ್ ಮಾಡಿದ್ದಾರೆ.
