KSRTC: ರಾಜ್ಯ ಸರ್ಕಾರ ತಾನು ಅಧಿಕಾರಕ್ಕೆ ಬರುವ ವೇಳೆ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಬಳಿಕ ಅವುಗಳನ್ನು ಅನುಷ್ಠಾನಗೊಳಿಸಿತು. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್(Free Bus) ಪ್ರಯಾಣವಾದ ‘ಶಕ್ತಿ ಯೋಜನೆ'(Shakti yojana) ಕೂಡ ಒಂದು. ಈ ಯೋಜನೆ ಅಡಿ ಇಂದು ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ಈ ಬೆನ್ನಲ್ಲೇ ಸರ್ಕಾರವು ಉಚಿತ ಬಸ್ ಪ್ರಯಾಣದ ಕುರಿತು ಮಹಿಳೆಯರಿಗೆ ಮತ್ತಷ್ಟು ಸಿಹಿ ಸುದ್ದಿಯನ್ನು ನೀಡಿದೆ.
ಶಕ್ತಿ ಯೋಜನೆಯಡಿಯಲ್ಲಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೀಗಾಗಿ ಬಸ್ ಗಳಲ್ಲಿ ನೂಕು ನುಗ್ಗಲು ಉಂಟಾಗುತ್ತಿದ್ದು ಇದನ್ನು ತಡೆಯಲು ಸರ್ಕಾರ ಮಹತ್ವದ ಕ್ರಮವನ್ನು ಕೈಗೊಂಡಿದೆ. ಅದೇನೆಂದರೆ ಬಸ್ ಸಂಖ್ಯೆಯಲ್ಲಿ ಇನ್ನೂ ಹೆಚ್ಚು ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದ್ದು, ಸುಮಾರು 2000 ಬಸ್ ಗಳನ್ನು ಖರೀದಿಸಲು ತಯಾರಿ ನಡೆಸಿದೆ.
ಹೌದು, ಮಹಿಳೆಯರ ಶಕ್ತಿ ಯೋಜನೆಗೆ ಮತ್ತಷ್ಟು ಬಲವನ್ನು ತುಂಬುವುದಕ್ಕೆ 2 ಸಾವಿರ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಇದಕ್ಕಾಗಿ 2000 ಹೊಸ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಈ ಹೊಸ 2 ಸಾವಿರ ಬಸ್‌ಗಳನ್ನು ಹಂಚಿಕೆ ಮಾಡಲಾಗಿತ್ತದೆ.
ಯಾವ ನಿಗಮಕ್ಕೆ ಎಷ್ಟೆಷ್ಟು ಬಸ್?
ಕಲ್ಯಾಣ ಕರ್ನಾಟಕ (ಕೆಕೆಎಸ್‌ಆರ್‌ಟಿಸಿ)-700
ದಕ್ಷಿಣ ಕರ್ನಾಟಕ (ಕೆಎಸ್‌ಆರ್‌ಟಿಸಿ) -500
ಬೆಂಗಳೂರು ನಗರ (ಬಿಎಂಟಿಸಿ) – 400
ವಾಯುವ್ಯ ಕರ್ನಾಟಕ (ಎನ್‌ಡಬ್ಲ್ಯೂಕೆಆರ್‌ಟಿಸಿ)- 400
ಒಟ್ಟು- 2000 ಖರೀದಿಸಲಿ ಸಾರಿಗೆ ಇಲಾಖೆ ಮುಂದಾಗಿದೆ.
