Home » ಕರ್ನಾಟಕ ಬಸ್ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ ಎಂದು ಮುದ್ರಣ| Sponsored by : ‘ಕಲ ಕುಂಡಿ’ ಗೆ ಚೀಟಿ ಕೊಟ್ಟ ತಂಡ !!!

ಕರ್ನಾಟಕ ಬಸ್ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ ಎಂದು ಮುದ್ರಣ| Sponsored by : ‘ಕಲ ಕುಂಡಿ’ ಗೆ ಚೀಟಿ ಕೊಟ್ಟ ತಂಡ !!!

by Mallika
0 comments

ಇದೇನಿದು ಎಡವಟ್ಟು. ಕೆಎಸ್ ಆರ್ ಟಿಸಿ ಯಿಂದ ಇಷ್ಟೊಂದು ದೊಡ್ಡ ಲೋಪ ಉಂಟಾಯಿತೇ ಎನ್ನುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಹೌದು ಕರ್ನಾಟಕ ಬಸ್ ಟಿಕೆಟ್‌ನಲ್ಲಿ ಜೈ ಮಹಾರಾಷ್ಟ್ರ ಎಂದು ಮುದ್ರಣಗೊಂಡಿದೆ. ಟಿಕೆಟ್ ಮಧ್ಯಭಾಗದಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ ಅಂತಾ ಪ್ರಿಂಟ್ ಮಾಡಲಾಗಿದ್ದು, ನಿಜಕ್ಕೂ ಪ್ರಯಾಣಿಕರು ಒಂದು ಕ್ಷಣ ಇದನ್ನು ನೋಡಿ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿ ಮುಖ ಮುಖ ನೋಡಿಕೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಈ ಮಹಾ ಯಡವಟ್ಟು ಮಾಡಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ, ಮಹಾರಾಷ್ಟ್ರ ರಾಜ್ಯ ಪರಿವಾಹನ ಎಂದು ಮುದ್ರಿಸಲಾಗಿದ್ದು ಕರ್ನಾಟಕ ಬಸ್ ಟಿಕೆಟ್ ನಲ್ಲಿ ಮಹಾರಾಷ್ಟ್ರ ಪ್ರೀತಿಗೆ ಜನ ಆಕ್ರೋಶ ಹೊರ ಹಾಕಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಬಸ್ಸಿನ ಟಿಕೆಟ್ ಮೇಲೆ ವಾ.ಕ.ರ. ಸಾ ಸಂಸ್ಥೆ ಗದಗ ಘಟಕ ಅಂತಾ ಮುದ್ರಿಸಲಾಗಿದೆ.

ಟಿಕೆಟ್ ನೋಡಿದ ಜನರು ಇದೇನು ಮಹಾರಾಷ್ಟ್ರವೋ ಕರ್ನಾಟಕವೋ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಎಸ್‌ಆರ್ಟಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

You may also like

Leave a Comment