Home » ಕುದ್ಮಾರು ಬೈಕ್‌ಗಳ ನಡುವೆ ಅಪಘಾತ | ಚಾರ್ವಾಕದ ರಾಜೇಶ್ ಮೃತ್ಯು

ಕುದ್ಮಾರು ಬೈಕ್‌ಗಳ ನಡುವೆ ಅಪಘಾತ | ಚಾರ್ವಾಕದ ರಾಜೇಶ್ ಮೃತ್ಯು

0 comments

ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಚಿಕಿತ್ಸೆ ಸ್ಪಂದಿಸದೆ ಯುವಕನೋರ್ವ ಮೃತಪಟ್ಟ ಘಟನೆ ಸೆ 30ರಂದು ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ನಡೆದಿದೆ.

ದೈಪಿಲ ಚಾರ್ವಾಕ ರಸ್ತೆಯ ಕುದ್ಮಾರು ಏರ್ಕಮೆ ಎಂಬಲ್ಲಿ ಸೆ.29ರಂದು ಅಪಘಾತ ಸಂಭವಿಸಿದ್ದು, ಚಾರ್ವಾಕ ಗ್ರಾಮದ ಕಂಟೇಲು ಖಂಡಿಗ ನಿವಾಸಿ ಗುಮ್ಮನ ಗೌಡ ಎಂಬವರ ಮಗ ರಾಜೇಶ್ (40 ವ) ಮೃತ ದುರ್ದೈವಿ.

ಆ ರಸ್ತೆಯಲ್ಲಿ ಬರುತ್ತಿದ್ದ ಚಾರ್ವಾಕ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಜಯಂತ್ ಅಂಬುಲ, ಆನಂದ ಗೌಡ ಅಂಬುಲ ತುರ್ತು ಸ್ಪಂಧಿಸಿ ಗಾಯಳುಗಳಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಪ್ರಮೋದ್ ಎಂಬವರ ರಿಕ್ಷಾದಲ್ಲಿ ತಕ್ಷಣ ಕಾಣಿಯೂರು ಆಸ್ಪತ್ರೆಗೆ ಸಾಗಿಸಿದ್ದಾರೆ.

ನಂತರ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಸಾಗಿಸಿ ನಂತರ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಕೃಷಿಕರಾಗಿದ್ದ ರಾಜೇಶ್ ತಂದೆ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇವರ ಸಹೋದರ ಆನಂದ ಗೌಡ ಸುಳ್ಯದ ಕೆವಿಜಿ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು ಪ್ರಕರಣ ದಾಖಲಾಗಿದೆ.

You may also like

Leave a Comment