Home » Kudremukh: ಕುದುರೆಮುಖ ರಾಷ್ಟ್ರೀಯ ಪಾರ್ಕ್‌ನಲ್ಲಿ ಕಾಡ್ಗಿಚ್ಚು; 15 ಹೆಕ್ಟೇರ್‌ ಅರಣ್ಯ ಸುಟ್ಟು ಭಸ್ಮ!

Kudremukh: ಕುದುರೆಮುಖ ರಾಷ್ಟ್ರೀಯ ಪಾರ್ಕ್‌ನಲ್ಲಿ ಕಾಡ್ಗಿಚ್ಚು; 15 ಹೆಕ್ಟೇರ್‌ ಅರಣ್ಯ ಸುಟ್ಟು ಭಸ್ಮ!

0 comments

Kudremukh: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ (KNP) ಮಂಗಳವಾರ ಕಾಡ್ಗಿಚ್ಚು ಸಂಭವಿಸಿದ್ದು, ಸುಮಾರು 15 ಹೆಕ್ಟೇರ್‌ ಅರಣ್ಯ ಭೂಮಿ ಬೆಂಕಿಗಾಹುತಿಯಾಗಿದೆ.

ಬೆಂಕಿ ಹೊತ್ತಿ ಉರಿಯಲು ಕಾರಣರಾದ ಅಪರಿಚಿತ ವ್ಯಕ್ತಿಗಳ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲು ಮಾಡಿದೆ. ಅರಣ್ಯದ ಒಳಗೆ ಮತ್ತು ಹೊರಗೆ ವಾಸಿಸುವ ಸ್ಥಳೀಯರು ಮತ್ತು ಬುಡಕಟ್ಟು ಜನಾಂಗದವರು ಇದರಲ್ಲಿ ಭಾಗಿಯಾಗಿರುವುದಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾಡ್ಗಿಚ್ಚು ನೈಸರ್ಗಿಕಲ್ಲ. ಅವೆಲ್ಲವೂ ಮಾನವ ನಿರ್ಮಿತ. ರಾಷ್ಟ್ರೀಯ ಉದ್ಯಾನವನದಲ್ಲಿ ಹಿಂದೆ ಅನೇಕ ಸಣ್ಣ ಬೆಂಕಿ ಸಂಭವಿಸಿದ್ದರು ಎಂದು ಹೇಳಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಕಾಡಿಗೆ ಬೆಂಕಿ ಹಚ್ಚುವುದರಿಂದ ಮೊದಲ ಮಳೆಯ ನಂತರ ಹುಟ್ಟಿಕೊಳ್ಳುವ ಹುಲ್ಲು ಜಾನುವಾರುಗಳ ಆಹಾರಕ್ಕೆ ಯೋಗ್ಯ ಎಂದು ಜನರ ನಂಬಿಕೆ.

ಕಾಡಿಗೆ ಬೆಂಕಿ ಹಚ್ಚಿದವರು ಯಾರು ಎಂದು ಇಲ್ಲಿಯವರೆಗೆ ಪತ್ತೆಯಾಗಿಲ್ಲ ಎಂದು ಕೆನ್‌ಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ್‌ ಎಂ ಬಾಬು ಹೇಳಿದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಮುಂದುವರಿದಿದೆ, ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

You may also like