25
Kukke: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರವಾದ ಜ.6 ರಂದು ದಾಖಲೆಯ 1400 ಅಧಿಕ ಆಶ್ಲೇಷ ಬಲಿ ಸೇವೆಗಳು ನಡೆದಿರುತ್ತದೆ. ಬೆಳಗ್ಗೆ 6:30 ಗಂಟೆಗೆ ಆರಂಭವಾದ ಆಶ್ಲೇಷ ಬಲಿ ಸೇವೆ ನಿರಂತರವಾಗಿ ನಾಲ್ಕು ಐದು ಬ್ಯಾಚುಗಳಲ್ಲಿ 11 ಗಂಟೆ ತನಕ ಆಶ್ಲೇಷ ಬಲಿ ಸೇವೆ ನಡೆಯಿತು.
ಸುಬ್ರಹ್ಮಣ್ಯನಿಗೆ ಮಂಗಳವಾರ ವಿಶೇಷ ದಿನವೂ ಆಗಿದ್ದರಿಂದ ಆಶ್ಲೇಷ ನಕ್ಷತ್ರವು ಈ ದಿನವೇ ಬಂದಿದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ಭಕ್ತರು ಸೇವೆಗಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು.
