Kukke Subrahmanya: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಕ್ತರಿಗೆ ಮೇ 30 ರಿಂದ ಬೆಳಗ್ಗೆ 8 ಗಂಟೆಗೆ ಉಚಿತ ಬೆಳಗಿನ ಉಪಹಾರ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಲಾಗುವುದು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಸಮಿತಿ ಅಧ್ಯಕ್ಷರು “ಪ್ರತಿ ದಿನ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಉಪಹಾರವನ್ನು ನೀಡಲಾಗುವುದು. ಇದು ದೇವರ ಪ್ರಸಾದದ ರೂಪದಲ್ಲಿ ಲಭ್ಯವಾಗುತ್ತದೆ” ಎಂದು ಹೇಳಿದರು.
ಉಪ್ಪಿಟ್ಟು, ಅವಲಕ್ಕಿ, ಹೆಸರುಕಾಳು, ಪುಳಿಯೋಗರೆ, ಪೊಂಗಲ್ ಮುಂತಾದ ಆಹಾರ ಉಪಹಾರದಲ್ಲಿ ಇರಲಿದೆ. ಪ್ರತಿದಿನ ಒಂದೊಂದು ಬಗೆಯ ಉಪಹಾರ ಸಿಗಲಿದ್ದು, ಇದು ಷಣ್ಮುಖ ಭೋಜನ ಶಾಲೆಯಲ್ಲಿ ಲಭ್ಯವಿರುತ್ತದೆ. ಉದ್ಘಾಟನಾ ದಿನವಾದ ಮೇ30 ರಂದು ನಡೆಯುವ ವಿಶೇಷ ಸಮಾರಂಭಕ್ಕೆ ಎಲ್ಲ ಭಕ್ತರಿಗೂ ಆಹ್ವಾನ ನೀಡಲಾಗಿದೆ.
