Home » Kukke Subramanya Temple: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಧ್ಯಕ್ಷ ಸ್ಥಾನಕ್ಕೆ ಹರೀಶ್‌ ಇಂಜಾಡಿ ಆಯ್ಕೆ

Kukke Subramanya Temple: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಧ್ಯಕ್ಷ ಸ್ಥಾನಕ್ಕೆ ಹರೀಶ್‌ ಇಂಜಾಡಿ ಆಯ್ಕೆ

0 comments

Dakshina Kannada: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷರ ಆಯ್ಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಾಜಿ ರೌಡಿಶೀಟರ್‌ ಹರೀಶ್‌ ಇಂಜಾಡಿ ನೇಮಕಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರ ಶಿಫಾರಸ್ಸಿನ ಮೇರೆಗೆ ಹರೀಶ್‌ ಇಂಜಾಡಿ ದೇವಾಲಯದ ವ್ಯವಸ್ಥಾಪನ ಆಡಳಿತ ಮಂಡಳಿ ಅಧ್ಯಕ್ಷರ ಆಯ್ಕೆಯಾಗಿದ್ದು, ಈ ಆಯ್ಕೆ ಗ್ರಾಮಸ್ಥರಿಗೆ ಅಸಮಾಧಾನ ಉಂಟಾಗಿದೆ.

ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ರೌಡಿಶೀಟರ್‌ ಅನ್ನು ಆಯ್ಕೆ ಮಾಡಿರುವುದನ್ನು ಗ್ರಾಮಸ್ಥರು, ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಿರೋಧ ಮಾಡುತ್ತಿದ್ದಾರೆ.

ಹರೀಶ್‌ ಇಂಜಾಡಿ ಮಾಜಿ ರೌಡಿ ಶೀಟರ್‌ ಆಗಿದ್ದು, ಜೈಲಿಗೆ ಹೋಗಿ ಬಂದಿದು, ನಕಲಿ ಚೆಕ್‌ ನೀಡಿ ಹಣ್ಣು ಕಾಯಿ ಟೆಂಡರ್‌ ಮಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ವಂಚನೆ ಮಾಡಿರುವ ಆರೋಪ ಇವರ ಮೇಲಿದೆ. ಈ ಪ್ರಕರಣದಲ್ಲಿ ಇವರ ಬಂಧನವಾಗಿತ್ತು. ಮರಳು ಮಾಫಿಯಾ, ಮರಗಳ್ಳ ಸಾಗಾಣೆಯಲ್ಲೂ ಇವರ ಕೈವಾಡವಿದೆ ಎನ್ನುವ ಆರೋಪವಿದೆ. ಇವರ ಆಯ್ಕೆ ಬೇಡ ಎನ್ನುವುದು ಗ್ರಾಮಸ್ಥರು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪತ್ರ ಬರೆದಿದ್ದು, ಆದರೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರ ಶಿಫಾರಸ್ಸಿನ ಮೂಲಕ ಹರೀಶ್‌ ಇಂಜಾಡಿ ಆಯ್ಕೆಯಾಗಿದ್ದು ಎಂದು ವರದಿಯಾಗಿದೆ.

ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಕೂಡಲೇ ಈ ಆಯ್ಕೆಯನ್ನು ಕೂಡಲೇ ಬಿಡಬೇಕೆಂದು ಆಗ್ರಹ ಮಾಡಿದ್ದಾರೆ.

You may also like