Home » ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಜೆಪಿ ಸುಳ್ಯ ಮಂಡಲದಿಂದ ನದಿ ಸ್ವಚ್ಚತಾ ಕಾರ್ಯಕ್ರಮ | ಸುಮಾರು 200 ಗೋಣಿಗಳಷ್ಟು ಪ್ಲಾಸ್ಟಿಕ್, ಬಟ್ಟೆ ನದಿಯಿಂದ ಹೊರತೆಗೆದರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಜೆಪಿ ಸುಳ್ಯ ಮಂಡಲದಿಂದ ನದಿ ಸ್ವಚ್ಚತಾ ಕಾರ್ಯಕ್ರಮ | ಸುಮಾರು 200 ಗೋಣಿಗಳಷ್ಟು ಪ್ಲಾಸ್ಟಿಕ್, ಬಟ್ಟೆ ನದಿಯಿಂದ ಹೊರತೆಗೆದರು

by Praveen Chennavara
0 comments

ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ, ವಿವಿಧ ಮೋರ್ಚಾಗಳ ಸಹಕಾರದೊಂದಿಗೆ , ಸುಬ್ರಹ್ಮಣ್ಯದ ಬಿಜೆಪಿ ಪ್ರಮುಖರ, ಕಾರ್ಯಕರ್ತರ ಆಯೋಜನೆಯಲ್ಲಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದರ್ಪಣ ತೀರ್ಥ, ಕನ್ನಡಿನದಿ ಸ್ವಚ್ಛತಾ ಕಾರ್ಯ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಇಂದು ಅಕ್ಟೋಬರ್ 2 , ಗಾಂಧಿ ಜಯಂತಿ ಪ್ರಯುಕ್ತ ಜರುಗಿತು, ಆದಿ ಸುಬ್ರಹ್ಮಣ್ಯದಿಂದ ಆರಂಭಗೊಂಡ ನದಿ ಸ್ವಚ್ಚತೆಯ ಸಂದರ್ಭದಲ್ಲಿ ಸುಮಾರು 200 ಗೋಣಿಗಳಷ್ಟು ಪ್ಲಾಸ್ಟಿಕ್,ಹಳೆ ಬಟ್ಟೆ, ಗೋಣಿ ಬಾಟಲಿಗಳನ್ನು ನದಿಯಿಂದ ಹೆಕ್ಕಿ ಸ್ವಚ್ಚಗೊಳಿಸಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಚಾಲನೆ ನೀಡಿದರು, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ,ಸುಭೋದ್ ಶೆಟ್ಟಿ ಮೇನಾಲ ಮತ್ತಿತರ ಪ್ರಮುಖರು ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

You may also like

Leave a Comment