Home » Mugdha Chaphekar: ಕುಂಕುಮ ಭಾಗ್ಯ ನಟಿಯ 9 ವರ್ಷದ ದಾಂಪತ್ಯ ಜೀವನ ಅಂತ್ಯ;

Mugdha Chaphekar: ಕುಂಕುಮ ಭಾಗ್ಯ ನಟಿಯ 9 ವರ್ಷದ ದಾಂಪತ್ಯ ಜೀವನ ಅಂತ್ಯ;

0 comments

Mugdha Chaphekar: ಕುಂಕುಮ ಭಾಗ್ಯ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿ ವೀಕ್ಷಕರ ಮನಗೆದ್ದ ನಟಿ ಮುಗ್ಧಾ ಚಾಪೇಕರ್‌ ತಮ್ಮ 9 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದಾರೆ.

ಮುಗ್ದಾ ಚಾಪೇಕರ್‌ ಮತ್ತು ಆಕೆಯ ಪತಿ ರಾವಿಶ್‌ ದೆಸಾಯಿ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವಿಚ್ಛೇದನದ ಕುರಿತು ಅವರು ಮಾಹಿತಿ ನೀಡಿದ್ದಾರೆ.

ಮುಗ್ದಾ ಚಾಪೇಕರ್‌ ಹಾಗೂ ರಾವಿಶ್‌ ದೇಸಾಯಿ ಪ್ರೀತಿಸಿ ಮದುವೆಯಾಗಿದ್ದರು. ಧಾರಾವಾಹಿ ಸೇರಿ ಇತರ ಟಿವಿ ಶೋಗಳ ಮೂಲಕ ಇವರ ಪ್ರೀತಿ ಆರಂಭಗೊಂಡಿತ್ತು. ಮದುವೆಯಾದ ಹೊಸದರಲ್ಲಿ ಇವರಿಬ್ಬರ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ. ಆದರೆ ಕಳೆದ ಮೂರು ವರ್ಷಗಳಲ್ಲಿ ಈ ಜೋಡಿ ನಡುವೆ ಅಂತರ ಹೆಚ್ಚಾಗಿತ್ತು. ಕಳೆದೊಂದು ವರ್ಷದಿಂದ ಇವರಿಬ್ಬರು ಬೇರೆ ಬೇರೆಯಾಗಿ ನೆಲೆಸಿದ್ದರು.

ಮುಗ್ದಾ ಚಾಪೇಕರ್‌ ಕುಂಕುಮಭಾಗ್ಯ ಸೇರಿ ಹಲವು ಹಿಂದಿ ಧಾರಾವಾಹಿ, ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿ ಮನೆಮಾತಾಗಿದ್ದಾರೆ. ರಾವಿಶ್‌ ದೇಸಾಯಿ ಕೂಡಾ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

You may also like