Home » Death: ಕುಂದಾಪುರ: ಎದೆನೋವಿನಿಂದ ಯುವಕ ಮೃತ್ಯು!

Death: ಕುಂದಾಪುರ: ಎದೆನೋವಿನಿಂದ ಯುವಕ ಮೃತ್ಯು!

0 comments
Tragic Story

Death: ಕೊಲ್ಲೂರಿನಲ್ಲಿ ಗುತ್ತಿಗೆ ಆಧಾರದಲ್ಲಿ ಯುಜಿಡಿ ಕೆಲಸಗಾರನಾಗಿದ್ದ ಕುಂದಾಪುರದ ಟಿಟಿ ರಸ್ತೆಯಲ್ಲಿ ನೆಲೆಸಿದ್ದ ವ್ಯಕ್ತಿಯೋರ್ವ ಜೂ. 12ರಂದು ವಾಂತಿಯಾಗಿ, ಎದೆ ನೋವು ಕಾಣಿಸಿಕೊಂಡು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ವಿಜಯ್ ಮಂಜುನಾಥ (35) ಎಂದು ತಿಳಿದು ಬಂದಿದೆ.

ಅವರು ಜೂ. 12ರ ಬೆಳಗ್ಗೆ 8.30ಕ್ಕೆ ಕೊಲ್ಲೂರಿನ ಪಂಪ್‌ ಶೆಡ್‌ನಲ್ಲಿರುವಾಗ ವಾಂತಿಯಾಗಿ, ಎದೆನೋವು ಕಾಣಿಸಿಕೊಂಡಿತು. ಕೂಡಲೇ ಕೊಲ್ಲೂರಿನ ಸರ್ಕಾರಿ ಆಸ್ಪತ್ರೆಗೆ, ಬಳಿಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ ಅಷ್ಟರೊಳಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕುಂದಾಪುರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

You may also like