Home » Kundapura: ಎದೆನೋವೆಂದು ಹೇಳಿದ ವ್ಯಕ್ತಿ ಮಲಗಿದ್ದಲ್ಲಿಯೇ ಸಾವು

Kundapura: ಎದೆನೋವೆಂದು ಹೇಳಿದ ವ್ಯಕ್ತಿ ಮಲಗಿದ್ದಲ್ಲಿಯೇ ಸಾವು

0 comments
Heart Attack

Kundapura: ಹಂಗಳೂರು ಗ್ರಾಮದ ಶ್ರೀನಿವಾಸ ಅವರ ಪುತ್ರ ಶರತ್‌ (35) ಮಲಗಿದ್ದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ.

ಜೂನ್‌ 23 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಇವರು ಮರುದಿನ ಬೆಳಗಿನ ಸಮಯದಲ್ಲಿ ಎದೆನೋವು ಆಗುತ್ತಿದೆ ಎಂದು ಹೇಳಿ ವಾಂತಿ ಮಾಡಿಕೊಂಡಿದ್ದಾರೆ. ನಂತರ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಪರೀಕ್ಷೆ ಮಾಡಿದ್ದು ಶರತ್‌ ಮೃತಪಟ್ಟಿರುವುದಾಗಿ ಹೇಳಿದರು. ಈ ಕುರಿತು ಪ್ರಕರಣ ದಾಖಲಾಗಿದೆ.

You may also like