Home » Kundapura: ಕೋರ್ಟ್‌ ಆವರಣದಲ್ಲಿ ಕುಡಿದು ಬಂದು ಮೂವರ ಅನುಚಿತ ವರ್ತನೆ: ಶೌಚಾಲಯ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ ನ್ಯಾಯಾಲಯ

Kundapura: ಕೋರ್ಟ್‌ ಆವರಣದಲ್ಲಿ ಕುಡಿದು ಬಂದು ಮೂವರ ಅನುಚಿತ ವರ್ತನೆ: ಶೌಚಾಲಯ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ ನ್ಯಾಯಾಲಯ

0 comments
High Court

Kundapura: ಕೋರ್ಟಿನ ಆವರಣಕ್ಕೆ ಮದ್ಯಪಾನ ಮಾಡಿ ಬಂದಿದ್ದಲ್ಲದೇ ಧೂಮಪಾನ ಮಾಡಿ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ಮಾಡಿದ ಮೂವರಿಗೆ ಎಚ್ಚರಿಕೆ ನೀಡಿದ್ದು, ಮಾತ್ರವಲ್ಲದೇ ನ್ಯಾಯಾಲಯದ ಶೌಚಾಲಯ ತೊಳೆಯುವಂತೆ ಕುಂದಾಪುರದ ಒಂದನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಅವರು ಆದೇಶ ನೀಡಿರುವ ಕುರಿತು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿ ಹೇಳಲು ಕೋರ್ಟಿಗೆ ಬಂದಿದ್ದ ಈ ಮೂವರು ತಮ್ಮ ಸರದಿಗಾಗಿ ಹೊರಗಡೆ ಹಾಕಲಾದ ಬೆಂಚಿನಲ್ಲಿ ಕಾಯುತ್ತಿದ್ದರು. ಈ ಸಂದರ್ಭ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದು, ಧೂಮಪಾನ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೋರ್ಟ್‌ ಸಿಬ್ಬಂದಿ ನ್ಯಾಯಾಧೀಶರ ಗಮನಕ್ಕೆ ಬಂದಿದ್ದರು.

ಅವರನ್ನು ಕೂಡಲೇ ಕರೆಸಿ, ವಿಚಾರಣೆ ಮಾಡಿ ಕೋರ್ಟಿನಲ್ಲಿ ಈ ರೀತಿಯ ಅನುಚಿತ ವರ್ತನೆ ತೋರಿದ್ದಕ್ಕೆ ಎಚ್ಚರಿಕೆ ನೀಡಿದ್ದಲ್ಲದೆ, ದಂಡವಾಗಿ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

You may also like