Home » ಕುಂಜಾಡಿ ನಾರಾಯಣ ರೈಯವರಿಗೆ ಲಷ್ಕರಿ ಪ್ರಶಸ್ತಿ

ಕುಂಜಾಡಿ ನಾರಾಯಣ ರೈಯವರಿಗೆ ಲಷ್ಕರಿ ಪ್ರಶಸ್ತಿ

by Praveen Chennavara
0 comments

ಪುತ್ತೂರು: ಲೋಕ ವಿಕಾಸ ಪ್ರತಿಷ್ಠಾನ ವೆರ್ಲಂಪಾಡಿ ಇದರ ವತಿಯಿಂದ 2021ನೇ ಸಾಲಿನ ವೇ.ಮೂ ಲಷ್ಕರಿ ಕೇಶವ ಭಟ್ ಜನ್ಮಶತಮಾನೋತ್ಸವದ ಪ್ರಶಸ್ತಿಗೆ ನಿವೃತ್ತ ಪ್ರಾಂಶುಪಾಲ ಕುಂಜಾಡಿ ನಾರಾಯಣ ರೈಯವರು ಆಯ್ಕೆಯಾಗಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಳನ್ನು ಗುರುತಿಸಿ ಈ ಆಯ್ಕೆಯನ್ನು ಮಾಡಲಾಗಿದೆ. ಸೆ.5ರಂದು ಮುರುಳ್ಯ ಪಜೆಂಬಿಲ ಕೆ. ನಾರಾಯಣ ರೈಯವರ ಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

ಲಷ್ಕರಿ ಕೇಶವ ಭಟ್‌ರವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸದಾಕಾಲ ತಮ್ಮನ್ನು ನಂಬದ ತೊಡಗಿಸಿಕೊಂಡು ಕೃಷಿ ಕ್ಷೇತ್ರದಲ್ಲೂ ಪರಿಣತಿ ಪಡೆದವರು. ಶಿಕ್ಷಣ ಹಾಗೂ ಶಿಕ್ಷಣಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು.

ಇವರ ಪುತ್ರ ನಿವೃತ್ತ ಶಿಕ್ಷಣಾಧಿಕಾರಿ, ಸಾಹಿತಿ ಎಸ್.ಜಿ ಕೃಷ್ಣರವರು ಸ್ಥಾಪಿಸಿದ ಲಷ್ಕರಿ ಪ್ರಶಸ್ತಿಯನ್ನು ಕಳೆದ 20 ವರ್ಷಗಳಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.

You may also like

Leave a Comment