Ladies Hostel : ಮಹಾರಾಷ್ಟ್ರದ ಸರ್ಕಾರಿ ಲೇಡಿಸ್ ಹಾಸ್ಟೆಲ್ ಒಂದು ದೇಶಾದ್ಯಂತ ಸದ್ದು ಮಾಡುತ್ತಿದೆ. ಕಾರಣ ಈ ಹಾಸ್ಟೆಲ್ ನಲ್ಲಿ ರಜೆ ಮುಗಿಸಿಕೊಂಡು ಹಾಸ್ಟೆಲಿಗೆ ಮರಳುವ ಬಾಲಕಿಯರಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಲಾಗುತ್ತಿದೆ.
ಹೌದು, ರಜೆ ಮುಗಿಸಿ ಮರಳಿದ ಬಾಲಕಿಯರ ಮೇಲಿನ ಅನುಮಾನದಿಂದ ಗರ್ಭಧಾರಣೆಯ ಪರೀಕ್ಷೆ ನಡೆಸಲಾಗಿದೆ ಎಂಬ ಆರೋಪಗಳು ಪುಣೆ ಜಿಲ್ಲೆಯ ಸರ್ಕಾರಿ ಬುಡಕಟ್ಟು ಬಾಲಕಿಯರ ಹಾಸ್ಟೆಲ್ ವಿರುದ್ಧ ಕೇಳಿಬಂದಿವೆ. ಎನ್ಡಿಟಿವಿ ವರದಿ ಮಾಡಿರುವಂತೆ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ಪ್ರದೇಶದಲ್ಲಿರುವ ಸರ್ಕಾರಿ ಬುಡಕಟ್ಟು ಬಾಲಕಿಯರ ಹಾಸ್ಟೆಲ್‌ನಲ್ಲಿ, ರಜೆಯಿಂದ ಹಿಂದಿರುಗಿದ ನಂತರ ವಿದ್ಯಾರ್ಥಿನಿಯರನ್ನು ಮೂತ್ರ ಗರ್ಭಧಾರಣೆಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ. ಏತನ್ಮಧ್ಯೆ, ಇಂತಹ ಪರೀಕ್ಷೆಗೆ ಸರ್ಕಾರವು ಯಾವುದೇ ರೀತಿಯ ಸೂಚನೆ ನೀಡದ ಹೊರತಾಗಿಯೂ ಹಾಸ್ಟೆಲ್ ಆಡಳಿತ ಮಂಡಳಿಯು ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.
ಇನ್ನು ಈ ವಿಷಯವು ನಾಗ್ಪುರ ಚಳಿಗಾಲದ ಅಧಿವೇಶನದಲ್ಲೂ ಪ್ರತಿಧ್ವನಿಸಿತು, ಶಾಸಕ ಸಂಜಯ್ ಖೋಡ್ಕೆ ಈ ವಿಷಯವನ್ನು ಎತ್ತಿದರು ಮತ್ತು ಸರ್ಕಾರದಿಂದ ಉತ್ತರಗಳನ್ನು ಒತ್ತಾಯಿಸಿದ್ದಾರೆ. ಈ ವಿಷಯದ ಗಂಭೀರವಾಗುತ್ತಿದ್ದಂತೆ, ಮಹಾರಾಷ್ಟ್ರ ಸರ್ಕಾರವು, “ಮಹಿಳಾ ವಿದ್ಯಾರ್ಥಿಗಳು ರಜೆಯಿಂದ ಹಿಂದಿರುಗಿದ ಬಳಿಕ ಗರ್ಭಧಾರಣೆಯ ಪರೀಕ್ಷೆಗೆ ಒಳಗಾಗಬೇಕೆಂಬುದು ಕಡ್ಡಾಯ” ಎಂಬ ಯಾವುದೇ ಸರ್ಕಾರಿ ನಿಯಮ ಅಥವಾ ಸುತ್ತೋಲೆ ಅಸ್ತಿತ್ವದಲ್ಲಿಲ್ಲ ಎಂದು ತಿಳಿಸಿ, ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದೆ.
