Home » ಉದ್ಯಮಿ ಪುತ್ರನ ಅಪಹರಿಸಿ 4 ಕೋಟಿ ಹಣಕ್ಕೆ ಬೇಡಿಕೆ | ಕುಖ್ಯಾತ ಲೇಡಿ ಡಾನ್ ಪುಷ್ಪಾ ಸಹಿತ ಸಹಚರರ ಬಂಧನ

ಉದ್ಯಮಿ ಪುತ್ರನ ಅಪಹರಿಸಿ 4 ಕೋಟಿ ಹಣಕ್ಕೆ ಬೇಡಿಕೆ | ಕುಖ್ಯಾತ ಲೇಡಿ ಡಾನ್ ಪುಷ್ಪಾ ಸಹಿತ ಸಹಚರರ ಬಂಧನ

by Praveen Chennavara
0 comments

ಬೆಂಗಳೂರು: ಉದ್ಯಮಿಯೊಬ್ಬರ ಪುತ್ರನನ್ನು ಅಪಹರಿಸಿ ನಾಲ್ಕು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇರಿಸಿದ್ದ ಲೇಡಿ ಡಾನ್ ಮತ್ತು ಆಕೆಯ ಸಹಚರರನ್ನು ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ರವಿ ಎಂಬವರ ಪುತ್ರ ಸೂರಜ್ ನನ್ನು ಲೇಡಿ ಡಾನ್ ಪುಷ್ಪಲತಾ ಮತ್ತು ತಂಡ ಅಪಹರಿಸಿತ್ತು ಎಂದು ಆರೋಪಿಸಲಾಗಿದೆ.

ಸರ್ಕಾರಿ ಟೆಂಡರ್ ಮಾಡಿಸಿಕೊಡುತ್ತೇನೆ ಎಂದು ಹೇಳಿ ಪುಷ್ಪಲತಾ ಹಲವು ಬಾರಿ ಸೂರಜ್ ನನ್ನು ಭೇಟಿ ಮಾಡಿದ್ದರು.

ಸಂತೋಷ್ ಎಂಬಾತನನ್ನು ಐಎಎಸ್ ಅಧಿಕಾರಿಯ ಪಿ ಎ ಎಂದು ಕೂಡ ಪುಷ್ಪಲತಾ ಪರಿಚಯಿಸಿದ್ದಳು.

ಬಳಿಕ ಸೂರಜ್ ಮನೆಗೆ ಬಂದ ಪುಷ್ಪಲತ ಮತ್ತು ಗ್ಯಾಂಗ್ ನಾಲ್ಕು ಕೋಟಿ ಹಣಕ್ಕೆ ಭೇಡಿಕೆ ಇರಿಸಿತ್ತು ಎಂದು ಹೇಳಲಾಗಿದೆ. ಇಲ್ಲದಿದ್ದರೆ ಅತ್ಯಾಚಾರದ ಕೇಸ್ ದಾಖಲಿಸುವ ಬೆದರಿಕೆ ಒಡ್ಡಿತ್ತು ಎಂದು ಆರೋಪಿಸಲಾಗಿದೆ.

ತಂದೆ ರವಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಅಂತಿಮವಾಗಿ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ

You may also like

Leave a Comment