Home » ಅಯ್ಯಪ್ಪನ ದರ್ಶನ ಪಡೆದ ಲಕ್ಷದ್ವೀಪ ಆಡಳಿತಾಧಿಕಾರಿ

ಅಯ್ಯಪ್ಪನ ದರ್ಶನ ಪಡೆದ ಲಕ್ಷದ್ವೀಪ ಆಡಳಿತಾಧಿಕಾರಿ

0 comments

ಶಬರಿಮಲೆ: ಲಕ್ಷದ್ವೀಪ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಶನಿವಾರ ಶಬರಿಮಲೆಗೆ ಭೇಟಿ ನೀಡಿ, ಅಯ್ಯಪ್ಪನ ದರ್ಶನ ಪಡೆದರು.

ಬೆಳಗ್ಗೆ ಕೊಚ್ಚಿಯಿಂದ ಹೆಲಿಕಾಪ್ಟರ್ ಮೂಲಕ ನಿಲಕ್ಕಲ್ ಹಾಗೂ ಅಲ್ಲಿಂದ ಪಂಪಾ ಗಣಪತಿ ದೇವಸ್ಥಾನಕ್ಕೆ ಆಗಮಿಸಿ ಮಾಲಾಧಾರಣೆ ಮಾಡಿದರು. ಕಾಲ್ನಡಿಗೆಯಲ್ಲಿ ಮಲೆ ಏರಿದ ಪ್ರಫುಲ್ ಪಟೇಲ್ ಅವರನ್ನು ಶಬರಿಮಲೆ ಎಡಿಎಂ ಅರುಣ್ ಎಸ್.ನಾಯರ್ ಸ್ವಾಗತಿಸಿದರು. ಲಕ್ಷದ್ವೀಪದ ಜಿಲ್ಲಾಧಿಕಾರಿ ಡಾ.ಗಿರಿಶಂಕರ್, ದಮನ್ ಜಿಲ್ಲಾಧಿಕಾರಿ ಸೌರಭ್ ಮಿಶ್ರಾ ಮೊದಲಾದವರು ಸಾಥ್ ನೀಡಿದರು. ಬಳಿಕ 18 ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಪಡೆದ ಪ್ರಫುಲ್ ಪಟೇಲ್, ಮಾಳಿಗಪುರಂ ದೇಗುಲಕ್ಕೆ ಭೇಟಿ ನೀಡಿದರು. ಸನ್ನಿಧಾನಂ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದರು. ಒಂದೂವರೆ ವರ್ಷ ಹಿಂದೆ ಪ್ರಫುಲ್ ಪಟೇಲ್ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿದ್ದರು.

You may also like