Home » Chennai: ಭಾಷಾ ವಿವಾದ; ರೈಲು ನಿಲ್ದಾಣದಲ್ಲಿ ಹಿಂದಿ ನಾಮಫಲಕಕ್ಕೆ ಮಸಿ

Chennai: ಭಾಷಾ ವಿವಾದ; ರೈಲು ನಿಲ್ದಾಣದಲ್ಲಿ ಹಿಂದಿ ನಾಮಫಲಕಕ್ಕೆ ಮಸಿ

0 comments

Chennai: ಕೇಂದ್ರ ಸರಕಾರ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆಡಳಿತಾರೂಢ ಡಿಎಂಕೆ ಆರೋಪ ಮಾಡುತ್ತಿರುವಂತೆ ತಮಿಳು ಪರ ಕಾರ್ಯಕರ್ತರು ಭಾನುವಾರ ಪೊಲ್ಲಾಚಿ ರೈಲು ನಿಲ್ದಾಣದ ನಾಮಫಲಕದಲ್ಲಿರುವ ಹಿಂದಿ ಅಕ್ಷರಗಳಿಗೆ ಮಸಿ ಬಳಿದಿದ್ದಾರೆ.

ಪೊಲ್ಲಾಚಿ ಜಂಕ್ಷನ್‌ ಹಿಂದಿಯಲ್ಲಿ ಬರೆದಿರುವ ಅಕ್ಷರಗಳಿಗೆ ತಮಿಳು ಪರ ಹೋರಾಟಗೃರು ಕಪ್ಪು ಮಸಿ ಬಳಿದಿದ್ದಾರೆ. ಈ ಘಟನೆ ನಡೆದ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಅದನ್ನು ಸರಿಪಡಿಸಿದ್ದಾರೆ. ಪೊಲ್ಲಾಚಿಯ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ರೈಲ್ವೆ ಕಾಯ್ದೆಯಡಿ ದೂರು ದಾಖಲು ಮಾಡಿದ್ದು, ತಪ್ಪಿತಸ್ಥರನ್ನು ಗುರುತಿಸಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ರೈಲ್ವೆ ಪಾಲ್ಛಾಟ್‌ ವಿಭಾಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

You may also like