Miss Venezuela: ಒರ್ಲಾಂಡೋ : ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೆನೆಜುವೆಲಾ(Miss Venezuela) ರೂಪದರ್ಶಿ ಅರಿಯಾನಾ ವಿಯೆರಾ ಆಸ್ಪತ್ರೆಯಲ್ಲಿ ಆಗಸ್ಟ್ 3ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜುಲೈ 13ರಂದು ಒರ್ಲಾಂಡೋದಲ್ಲಿ ವಿಯೆರಾ ಅವರ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಇದೀಗ ಚಿಕಿತ್ಸೆ ಫಲಿಸದೇ ವಿಯೆರಾ ಇಹಲೋಕ ತ್ಯಜಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ನಡೆಯುತ್ತಿರುವ ಮಿಸ್ ಲ್ಯಾಟಿನ್ ಅಮೆರಿಕ ಆಫ್ ದಿ ವಲ್ಡ್ 2023 ಸ್ಪರ್ಧೆಯಲ್ಲಿ ಅವರು ತಮ್ಮ ದೇಶವನ್ನು ಪ್ರತಿನಿಧಿಸಬೇಕಿತ್ತು. ಈಕೆ ಕೇವಲ ರೂಪದರ್ಶಿ, ನಟಿ ಮಾತ್ರವಲ್ಲದೇ 2023ರ ‘ಮಿಸ್ ವೆನೆಜುವೆಲಾ’ ಆಗಿದ್ದರು.
ಅರಿಯಾನಾ ವಿಯೆರಾ ಸಾವಿನ ಕುರಿತು ಆಕೆಯ ತಾಯಿ ಇನ್ಸ್ಟಾಗ್ರಾಂನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಜುಲೈ 13ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್ 3ರಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಇದನ್ನೂ ಓದಿ: ಹೃದಯಾಘಾತ, ಮದುವೆಯಾದ ಒಂದೇ ವರ್ಷಕ್ಕೆ ಸಾವಿಗೀಡಾದ ಖ್ಯಾತ ಕಿರುತೆರೆ ನಟಿಯ ಗಂಡ!
