Free current Scheme: ರಾಜ್ಯ ಕಾಂಗ್ರೆಸ್
ಹೌದು, ಕಾಂಗ್ರೆಸ್ ಗ್ಯಾರಂಟಿಗಳಿಗೆ ರಾಜ್ಯದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ಕೂಡ ಫ್ರೀ ಕರೆಂಟ್(Free current Scheme) ಸಿಗುತ್ತದೆ ಎಂಬ ಕಾರಣಕ್ಕೆ ರಾಜ್ಯದ ಜನ ಗೃಹಜ್ಯೋತಿ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದರು. ಜೂನ್ 18 ರಿಂದ ಅರ್ಜಿ ಹಾಕುವ ಪ್ರಕ್ರಿಯೆ ಆರಂಭವಾದಾಗಿನಿಂದ ಭರ್ಜರಿ ರೆಸ್ಪಾನ್ಸ್ ನೀಡುತ್ತಿದ್ದರು. ಸರ್ವರ್ ಬ್ಯುಸಿಯಾಗುವ ಮಟ್ಟಿಗೆ ಅರ್ಜಿ ಹಾಕಲು ಮುಗಿಬೀಳುತ್ತಿದ್ದರು. ಆದರೀಗ ಈ ಯೋಜನೆಗೆ ಅರ್ಜಿ ಹಾಕುವವರ ಸಂಖ್ಯೆಯೇ ಕಡಿಮೆಯಾಗಿದೆ. ಉಚಿತವಾಗಿ ಕರೆಂಟ್ ಕೊಡುತ್ತೇವೆ, ಅರ್ಜಿ ಹಾಕಿ ಸಾಕು ಎಂದು ಸರ್ಕಾರ ಹೇಳಿದರೂ ಕೂಡ ಜನ ಯಾಕೋ ಹಿಂದೇಟು ಹಾಕುತ್ತಿದ್ದಾರೆಂದು ವಿದ್ಯುತ್ ನಿಗಮವೇ ತಿಳಿಸಿದೆ.
ಆರಂಭದಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಜನರು ಮುಗಿಬಿದ್ದಿದ್ದರು, ಅದ್ರೆ ಆರಂಭ ದಲ್ಲಿಯೇ ಸರ್ವರ್ ಸಮಸ್ಯೆ ಉಂಟಾಯಿತು, ಆರಂಭಿಕ ಹಂತದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾದಾಗ ಜನರು ಅರ್ಜಿ ಸಲ್ಲಿಕೆ ಗೆ ಕಷ್ಟ ಪಡಬೇಕಾಯಿತು, ಆರಂಭಿಕ ಹಂತದಲ್ಲಿ 8ರಿಂದ 9 ಲಕ್ಷ ಮಂದಿ ನೋಂದಣಿ ಮಾಡಿದ್ದರು, ಜುಲೈ 5ರಂದು ನೋಂದಣಿ ಒಂದು ಕೋಟಿ ಆಗಿತ್ತು. ಆದರೀಗ ಆರಂಭದ ಉತ್ಸಾಹಕ್ಕೆ ಹೋಲಿಸಿದರೆ ಇತ್ತೀಚೆಗೆ ಅರ್ಜಿದಾರರ ಸಂಖ್ಯೆ ಭಾರೀ ನಿರಾಶಾಯದಾಯಕವಾಗಿದೆ. ತುಂಬಾ ನಿಧಾನಗತಿಯನ್ನು ಕಾಣುತ್ತಿದೆ.
ಬೇಗನೇ ನೊಂದಾಯಿಸಿ, ಫ್ರೀ ಕರೆಂಟ್ ನಿಮ್ಮದಾಗಿಸಿ:
ಅಂದಹಾಗೆ ಈ ತಿಂಗಳ 25ರ ಒಳಗೆ ಅರ್ಜಿ ಸಲ್ಲಿಕೆ ಮಾಡಿದ್ರೆ ಮಾತ್ರ ಆಗಸ್ಟ್ ನಿಂದ ಗೃಹಜ್ಯೋತಿ ಸೌಲಭ್ಯ ಸಿಗುತ್ತದೆ. ಇಲ್ಲದಿದ್ದರೆ ಬಿಲ್ ಕಟ್ಟಬೇಕು. ಅತೀ ಬೇಗನೆ ನೊಂದಣಿ ಮಾಡಿಕೊಳ್ಳುವುದು ಒಳಿತು. ಅರ್ಜಿ ಸಲ್ಲಿಕೆ ಮಾಡಲು ಸರ್ಕಾರ ಯಾವುದೇ ರೀತಿಯ ಸಮಯ ನಿಗದಿ ಮಾಡದೇ ಇದ್ದರೂ ಜುಲೈ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್ ನಲ್ಲಿ ಉಚಿತ ವಾಗಿ ದೊರೆಯಲಿದೆ. ಒಂದು ದಿನ ತಡ ಮಾಡಿದರೂ ಆಗಸ್ಟ್ ನಲ್ಲಿ ನೀವು ಬಿಲ್ ಪಾವತಿಸಬೇಕಾಗುತ್ತದೆ.
ಬೇಗನೇ ನೊಂದಾಯಿಸಿಕೊಳ್ಳಿ:
ಅರ್ಜಿ ಸಲ್ಲಿಕೆ ಮಾಡಿದ್ರೆ ಮಾತ್ರ ಆಗಸ್ಟ್(August) ನಿಂದ ಗೃಹಜ್ಯೋತಿ ಸೌಲಭ್ಯ ಸಿಗಲಿದ್ದು, ಅತೀ ಬೇಗನೆ ನೊಂದಣಿ ಮಾಡಿಕೊಳ್ಳುವುದು ಒಳಿತು, ಈ ಅರ್ಜಿ ಸಲ್ಲಿಕೆ ಮಾಡಲು ಸಮಯ ನಿಗದಿ ಮಾಡದೇ ಇದ್ದರೂ ಜುಲೈ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್ ನಲ್ಲಿ ಉಚಿತ ವಾಗಿ ದೊರೆಯಲಿದೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಲಿಂಕ್
‘ಗೃಹಜ್ಯೋತಿ’ ಯೋಜನೆ ಫಲಾನುಭವಿಯಾಗಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. https://sevasindhugs.karnataka.gov.in/ ಲಿಂಕ್ ಕ್ಲಿಕ್ ಮಾಡಿದರೆ ಅದರಲ್ಲಿ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ವಿವರವಿದೆ. ‘ಗೃಹಜ್ಯೋತಿ’ ಕ್ಲಿಕ್ ಮಾಡಿದರೆ ಮುಂದಿನ ಪುಟ ತೆರದುಕೊಳ್ಳಲಿದೆ.
ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು?
ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವಾಗ ಕೇಳುವ ವಿವರಗಳು
ಎಸ್ಕಾಂ ಹೆಸರು
ಖಾತೆ ಸಂಖ್ಯೆ
ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ
ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ
ಎಸ್ಕಾಂ ಹೆಸರು1
ಬಳಕೆದಾರರ ವಿಧ (ಇಲ್ಲಿ ಎರಡು ಆಯ್ಕೆಗಳಿದ್ದು ಬಾಡಿಗೆದಾರರು/ ಮಾಲೀಕರು) ಎಂದಿದೆ
ಆಧಾರ್ ಸಂಖ್ಯೆ
ಅರ್ಜಿದಾರರ ಹೆಸರು
ಸಂವಹನಕ್ಕಾಗಿ ದೂರವಾಣಿ ಸಂಖ್ಯೆ
ಎಲ್ಲಾ ವಿವರ ಭರ್ತಿ ಮಾಡಿದ ಮೇಲೆ ಈ ಮೇಲಿನ ಖಾತೆ ಸಂಖ್ಯೆಯನ್ನು ಗೃಹ ಬಳಕೆಗೆ ಮಾತ್ರ ಬಳಸಲಾಗುತ್ತದೆ. ಒಂದು ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಿದ್ದಲ್ಲಿ ಪ್ರಯೋಜನಗಳನ್ನು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Asha workers salary: ಆಶಾ ಕಾರ್ಯಕರ್ತೆಯರಿಗೆ ಬಿಗ್ ಶಾಕ್- ವೇತನವೂ ಇಲ್ಲ, ಪೆನ್ಶನ್ನೂ ಇಲ್ಲ ಎಂದು ಉಲ್ಟಾ ಹೊಡೆದ ಸರ್ಕಾರ !!
