Gruhalakshmi Yojana Login ID: ಗೃಹಲಕ್ಷ್ಮಿ ಯೋಜನೆಯ (Gruhalakshmi Yojana Login ID) ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೀಡಿದೆ. ಅಂತೆಯೇ ಮಹಿಳೆಯರು ತಾ ಮುಂದು ತಾ ಮುಂದು ಎಂದು ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್ ನಲ್ಲಿ ಕ್ಯೂ ನಿಂತಿದ್ದಾರೆ.
ಆದರೆ ಗೃಹಲಕ್ಷ್ಮಿ ಯೋಜನೆಗೆ ಸ್ವೀಕೃತಿ ಶುಲ್ಕ ಎಂದು ಇಪ್ಪತ್ತು ರೂಪಾಯಿಗಳನ್ನು ಬಿಟ್ಟರೆ ಹೆಚ್ಚಿನ ಹಣ ತೆಗೆದುಕೊಳ್ಳಬಾರದು ಎಂದು ಸರ್ಕಾರದ ಆದೇಶವಿದ್ದರೂ ಸಹ ರಾಜ್ಯದ ಹಲವು ಪ್ರದೇಶಗಳಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿದೆ.
ಹೌದು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಮೂರು ಸೈಬರ್ ಶಾಪ್ ಮೇಲೆ ತಹಸಿಲ್ದಾರ್ ನೇತೃತ್ವದಲ್ಲಿ ದಾಳಿ ಮಾಡಿ ಶಾಪ್ ಗಳನ್ನು ಸೀಜ್ ಮಾಡಿದ್ದಾರೆ.
ಸದ್ಯ ಹೊಸದುರ್ಗ ತಹಶೀಲ್ದಾರ್ ಪುಟ್ಟರಾಜಗೌಡ ನೇತೃತ್ವದಲ್ಲಿ ದಾಳಿ ನಡೆಸಿ ಗ್ರಾಮ ಒನ್, ಕರ್ನಾಟಕ ಒನ್, ಕೇಂದ್ರಗಳ ಮೇಲೆ ದಾಳಿ ಮಾಡಿ ಮೂರು ಸೈಬರ್ ಸೆಂಟರ್ಗಳನ್ನು ಸೀಜ್ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಅದಲ್ಲದೆ ಜನಸ್ನೇಹಿ, ಸ್ಪೂರ್ತಿ, ವೈಷ್ಣವಿ ಎಂಬ ಸೈಬರ್ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಂಡು ಲಾಗಿನ್ ಸಂಖ್ಯೆ ನೀಡಿದವರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಮಹಿಳೆಯರು ಧರಿಸುವ ಶರ್ಟ್ ಬಟನ್ ಎಡಭಾಗದಲ್ಲಿರುವುದೇಕೆ? ಇದು ಫ್ಯಾಶನ್ ಮಾತ್ರ ಅಲ್ಲ|ನಿಜವಾದ ಕಾರಣ ಇಲ್ಲಿದೆ !
