Tomato Price: ರಾಜ್ಯದಲ್ಲಿ (Karnataka) ಈ ಹಿಂದೆ ಟೊಮೆಟೊ ದರ (Tomato Price) ಭಾರಿ ಹೆಚ್ಚಳವಾಗಿತ್ತು. ಜನಸಾಮಾನ್ಯರು ಟೊಮೇಟೊ ಕೊಳ್ಳಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಎದುರಾಗಿತ್ತು. ಇದೀಗ ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಅದರಲ್ಲೂ ಗೃಹಿಣಿಯರಿಗೆ ಇದು ಭಾರಿ ಸಂತಸದ ಸುದ್ದಿಯಾಗಿದೆ. ಹೌದು, ಮತ್ತೆ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದೆ ಕೆಂಪು ಕೆನ್ನೆಯ ಬೆಡಗಿ. ಟೊಮೆಟೊ ದರ ದಿಡೀರ್ ಇಳಿಕೆ ಕಂಡಿದೆ.
ಟೊಮೆಟೋ ಪೂರೈಕೆ ಹೆಚ್ಚಿದಂತೆ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ದರ ಇನ್ನಷ್ಟು ಕಡಿಮೆಯಾಗಿದೆ.
ಪಿಎಸ್‌ಆರ್ ಮಂಡಿಯವರು ರೈತರಿಂದ 400 ಬಾಕ್ಸ್‌ಗಳನ್ನು ತಲಾ 1,680 ರೂ.ಗೆ, ಜೆಕೆ ಮಂಡಿಯವರು 500 ಬಾಕ್ಸ್‌ಗಳನ್ನು ತಲಾ 1,550 ರೂ.ಗೆ, ಕೆಎನ್‌ಎನ್ ಮಂಡಿಯವರು 650 ಬಾಕ್ಸ್, ಕೆಎನ್‌ಎಸ್ ಮಂಡಿಯವರು 400 ಬಾಕ್ಸ್, ಎಸ್‌ಎಂಎಸ್ ಮಂಡಿಯವರು 700 ಬಾಕ್ಸ್‌ಗಳನ್ನು ತಲಾ 1,500ರ ದರದಲ್ಲಿ ಖರೀದಿಸಿದ್ದಾರೆ.
ಶುಕ್ರವಾರ ನಡೆದ ಹರಾಜಿನಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್ ದರ 1,500 ರೂ. ಇತ್ತು. ಇದು ಹೆಚ್ಚಿನ ಮೊತ್ತ 1,680 ರೂ.ಗೆ ಮಾರಾಟವಾಗಿದೆ. 15 ಕೆ.ಜಿ ಟೊಮೆಟೊ ಗುರುವಾರ ಸರಾಸರಿ 1,700 ರೂ. ಇತ್ತು. ಇದು ಅತಿ ಹೆಚ್ಚಿನ 1,810 ರೂ.ಗೆ ಮಾರಾಟವಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ 15 ಕೆ.ಜಿ.ಬಾಕ್ಸ್ ಟೊಮೆಟೊ 2,700 ರೂ.ಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು.
ಎಪಿಎಂಸಿಗೆ 10,590 ಕ್ವಿಂಟಲ್ ಅಂದರೆ 70,600 ಬಾಕ್ಸ್ ಟೊಮೆಟೊ ಆವಕವಾಗಿತ್ತು. ಗುರುವಾರ 9,703 ಕ್ವಿಂಟಲ್ ಅಂದರೆ 64,693 ಬಾಕ್ಸ್ ಟೊಮೆಟೊ ಪೂರೈಕೆ ಆಗಿತ್ತು. ಒಂದೇ ದಿನದಲ್ಲಿ ಸುಮಾರು ಆರು ಸಾವಿರ ಬಾಕ್ಸ್ ಟೊಮೆಟೊ ಹೆಚ್ಚು ಪೂರೈಕೆ ಆಗಿದೆ. ಆದ್ದರಿಂದ ಬೇಡಿಕೆ ಕಡಿಮೆ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಯಲ್ಲೋ ಬೋರ್ಡ್ ಗಾಡಿಯವರ BPL ಕಾರ್ಡು ರದ್ದು ಶಾಕಿಂಗ್ ವಿಚಾರ:ಸರ್ಕಾರ ಕೊಡ್ತು ಹೊಸ ಆದೇಶ !
