Home » Lottery Monsoon Bumper Prize: ಪೌರ ಕಾರ್ಮಿಕರ ಮನೆ ಬಾಗಿಲಿಗೆ ಬಂದ ‘ ಲಕ್ಷ್ಮೀ’!!!ಲಾಟರಿ ಮೂಲಕ ಒಲಿದು ಬಂದ 10 ಕೋಟಿ ಹಣ!!!

Lottery Monsoon Bumper Prize: ಪೌರ ಕಾರ್ಮಿಕರ ಮನೆ ಬಾಗಿಲಿಗೆ ಬಂದ ‘ ಲಕ್ಷ್ಮೀ’!!!ಲಾಟರಿ ಮೂಲಕ ಒಲಿದು ಬಂದ 10 ಕೋಟಿ ಹಣ!!!

0 comments
Lottery Monsoon Bumper Prize

lottery Monsoon Bumper Prize : ಪೌರ ಕಾರ್ಮಿಕರ ಮನೆಗೆ ಲಕ್ಷ್ಮೀ ಒಲಿದಿದ್ದಾಳೆ. ಹೌದು, ಕಡು ಬಡ ಕುಟುಂಬದ ಮುನ್ಸಿಪಾಲ್ಟಿಯ 11 ಮಹಿಳಾ ಪೌರ ಕಾರ್ಮಿಕರಿಗೆ ಲಾಟರಿ ಮೂಲಕ 10 ಕೋಟಿ ಮೌಲ್ಯ ಲಭಿಸಿದೆ.

ಕಡು ಬಡ ಕುಟುಂಬಕ್ಕೆ ಸೇರಿದ ಕೇರಳದ ಮಲಪ್ಪುರಂ ಜಿಲ್ಲೆಯ 11 ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ಗುಂಪು ಜೊತೆಯಾಗಿ ಲಾಟರಿಯನ್ನು ಖರೀದಿಸಿದ್ದಾರೆ. ಸದ್ಯ ಇವರು
10 ಕೋಟಿ ರೂ. ರಾಜ್ಯ ಸರ್ಕಾರದ ಮಾನ್ಸೂನ್ ಬಂಪರ್ ಲಾಟರಿಯನ್ನು (lottery Monsoon Bumper ) ಪಡೆದಿದ್ದಾರೆ.

11 ಮಂದಿಯು ಹರಿತ ಕರ್ಮ ಸೇನೆಯ ( Haritha Karma Sena) ಸದಸ್ಯರಾಗಿದ್ದಾರೆ. ಈ ಸೇನೆಯು ಕೇರಳ ರಾಜ್ಯದ ಕುಟುಂಬಶ್ರೀ ಮಿಷನ್‌ನ ಹಸಿರು ಪಡೆಯಾಗಿದೆ. ಇವರೆಲ್ಲ ಅತ್ಯಂತ ಕಷ್ಟಪಟ್ಟು ದುಡಿಯುವ ಕಾರ್ಮಿಕರು. ತಮ್ಮ ಬದುಕು ಸಾಗಿಸಲು ಬಹಳಷ್ಟು ಶ್ರಮ ಪಡುತ್ತಿದ್ದಾರೆ. 11 ಜನರ ಪೈಕಿ ಮೂವರು ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಉಳಿದವರು ತ್ಯಾಜ್ಯವನ್ನು ಬೇರ್ಪಡಿಸುವ ಮತ್ತು ತೂಕ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ತಿಂಗಳಿಗೆ 8000 ರಿಂದ 14000 ಸಂಪಾದಿಸುತ್ತಾರೆ ಎನ್ನಲಾಗಿದೆ.

49 ವರ್ಷದ ರಾಧಾ ಎಂಬವರು ಲಾಟರಿ ಟಿಕೆಟ್ ಖರೀದಿಸುವ ಬಗ್ಗೆ ತಂಡದ ಸದಸ್ಯರಿಗೆ ಸಲಹೆ ನೀಡಿದರು. ಹಾಗೂ ಸ್ವತಃ ಅವರ ಲಾಟರಿ ಎಜೆಂಟರಿಂದ ಅದೃಷ್ಟ ಶಾಲಿ ಟಿಕೆಟ್ ಪಡೆದುಕೊಂಡರು. ಈ ಹನ್ನೊಂದು ಮಂದಿಗೆ ಸ್ವಂತವಾಗಿ ಟಿಕೆಟ್ ಖರೀದಿಸುವಷ್ಟು ಹಣವಿಲ್ಲದ ಕಾರಣ ಏಳು ಜನ ಜತೆಯಾಗಿ 250 ಪಾವತಿಸಿ ಲಾಟರಿ ಟಿಕೆಟ್ ಖರೀದಿಸಿದ್ದರು. ಇದು ನಾಲ್ಕನೇ ಬಾರಿಯ ಪ್ರಯತ್ನವಾಗಿದ್ದು, ಅದರಲ್ಲಿ ಅವರು ಭರ್ಜರಿ ಯಶಸ್ಸುಗಳಿಸಿದ್ದಾರೆ.

BR-92 ಲಕ್ಕಿ ಡ್ರಾದ ವಿಜೇತ ಟಿಕೆಟ್ MB200261 ಆಗಿತ್ತು. ಲಾಟರಿಯು 10 ಲಕ್ಷ, 5 ಲಕ್ಷ, 3 ಲಕ್ಷ, 1ಲಕ್ಷ ಇತ್ಯಾದಿ ಬಹು ಬಹುಮಾನಗಳನ್ನು ಹೊಂದಿದೆ. ಸದ್ಯ ಇವರು 10 ಕೋಟಿ ಮೌಲ್ಯ ಪಡೆದಿದ್ದಾರೆ. ಈ 11 ಮಂದಿಯೂ ಸಾಕಷ್ಟು ಸಾಲ ಮತ್ತು ಜವಾಬ್ದಾರಿಯನ್ನು ಹೊಂದಿರುವ ಬಡ ಕುಟುಂಬಗಳಿಂದ ಬಂದವರು. ಒಬ್ಬರಿಗೆ 3 ಲಕ್ಷ ಸಾಲವಿದೆ. ಸದ್ಯ ಲಾಟರಿಯ ಬಹುಮಾನದಿಂದ ಬರುವ ಹಣ ಸಾಲ ತೀರಿಸಲು ಸಹಕಾರಿಯಾಗಿದೆ.
ಈ ಗುಂಪು ಈ ಹಿಂದೆ ಓಣಂ ಬಂಪರ್‌ನಲ್ಲಿ 71000 ಗೆದ್ದಿತ್ತು.

 

ಇದನ್ನು ಓದಿ: DL Smart Card: ವಾಹನ ಸವಾರರೇ, ನಿಮಗಿದೋ ಮಹತ್ವದ ಸುದ್ದಿ! DL ಗೆ ಸಂಬಂಧಪಟ್ಟಂತೆ ಬಂತು ನೋಡಿ ಮಹತ್ವದ ಘೋಷಣೆ!!! 

You may also like

Leave a Comment