PM Kisan Maan Dhan Yojana: ಕೇಂದ್ರ ಸರ್ಕಾರ (government ) ರೈತರಿಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರ ಉನ್ನತಿಗಾಗಿ ಭಾರತ ಸರ್ಕಾರ ನಡೆಸುತ್ತಿರುವ ಪ್ರಮುಖ ಯೋಜನೆಯಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ. (PM Kisan Scheme Latest News) ಸರ್ಕಾರವು ರೈತರಿಗೆ ವಾರ್ಷಿಕ 6000 ರೂ. ಒದಗಿಸುತ್ತಿದ್ದು, ಕೇಂದ್ರ ಸರ್ಕಾರ ಈಗಾಗಲೇ ಪಿಎಂ ಕಿಸಾನ್ ಯೋಜನೆಯ ಹಣವನ್ನು ರೈತರಿಗೆ ನೀಡಿದೆ. ಜು.27 ರಂದು 14ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇದೀಗ ಈ ಬೆನ್ನಲ್ಲೇ ಕೇಂದ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಇನ್ನು ಮುಂದೆ ಪ್ರತಿ ತಿಂಗಳು 3000 ರೂ ರೈತರ ಖಾತೆಗೆ ಬಂದು ಬೀಳುತ್ತದೆ.
ಹೌದು, ಇದೀಗ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯೊಂದಿಗೆ( PM Kisan Scheme) ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು (PM Kisan Maan Dhan Yojana) ಪ್ರಾರಂಭಿಸಿದೆ. ಇದೊಂದು ಪಿಂಚಣಿ ಯಾಗಿದ್ದು ರೈತರಿಗೆ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಮೂಲಕ ಸರ್ಕಾರ ರೈತರಿಗೂ ಪಿಂಚಣಿ ನೀಡುತ್ತಿದೆ.
ಪ್ರಧಾನಮಂತ್ರಿ ಮಾನ್ ಧನ್ ಯೋಜನೆ ಅಡಿಯಲ್ಲಿ, ಸರ್ಕಾರವು ರೈತರ ಖಾತೆಗೆ ಪ್ರತಿ ತಿಂಗಳು 3000 ರೂ.ಗಳ ಪಿಂಚಣಿಯನ್ನು ವರ್ಗಾವಣೆ ಮಾಡುತ್ತದೆ. ಯೋಜನೆಯ ಪ್ರೀಮಿಯಂ ಅನ್ನು ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಆದರೆ ನೀವು ಇದಕ್ಕಾಗಿ ಪ್ರತ್ಯೇಕ ಫಾರ್ಮ್ ಅನ್ನು ಭರ್ತಿ ಮಾಡಬೇಕು.
ದೇಶದ ಹಿರಿಯ ರೈತರಿಗೆ ಪಿಂಚಣಿ(pension) ನೀಡುವ ನಿಟ್ಟಿನಲ್ಲಿ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಪಿಂಚಣಿ ಯೋಜನೆಯ ಲಾಭಕ್ಕಾಗಿ ರೈತರು ಪ್ರತಿ ತಿಂಗಳು 55 ರಿಂದ 200 ರೂ. ಪಾವತಿಸಬೇಕಾಗುತ್ತದೆ. ಈ ಪಿಂಚಣಿಗಾಗಿ ನೀವು ವಯಸ್ಸಿಗನುಗುಣವಾಗಿ ನಿಗದಿ ಮಾಡಿರುವ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ . 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಭಾಗವಹಿಸಬಹುದು.
ಪ್ರಧಾನಮಂತ್ರಿ ಮಾನ್ ಧನ್ ಯೋಜನೆಯಡಿ ನೊಂದಾಯಿತ ವ್ಯಕ್ತಿಯ ವಯಸ್ಸು 60 ವರ್ಷಗಳಾದಾಗ, ಈ ಯೋಜನೆಯಿಂದ ಲಾಭವನ್ನು ಪಡೆಯಬಹುದು. ಹಿರಿಯ ರೈತರಿಗೆ ಪ್ರತಿ ತಿಂಗಳು 3000 ರೂ. ಅಂದರೆ ವರ್ಷದಲ್ಲಿ 36 ಸಾವಿರ ರೂ. ಗಳ ಪಿಂಚಣಿ ಖಾತೆಗೆ ಬರಲು ಪ್ರಾರಂಭಿಸುತ್ತದೆ.
