AI News reader: ಈಗಾಗಲೇ ಒಡಿಶಾ ಮೂಲದ ಖಾಸಗಿ ಸುದ್ದಿ ವಾಹಿನಿ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಕೃತಕ ಸುದ್ದಿ ವಾಚಕಿಯನ್ನು (AI News reader) ಪರಿಚಯಿಸಿದೆ. ಕೃತಕ ಆಂಕರ್ ‘ಲೀಸಾ’ ಒಡಿಶಾದ ಮೊದಲ ಮತ್ತು ದೇಶದ ಎರಡನೆಯ ‘AI’ ನಿರೂಪಕಿ. ಈ ಸುದ್ದಿ ಎಲ್ಲೆಡೆ ಹಬ್ಬುವ ಬೆನ್ನಲ್ಲೆ ಇದೀಗ ಪವರ್ ಟಿವಿಯು ಸೌಂದರ್ಯ ಹೆಸರಿನ ಎಐ ಆ್ಯಂಕರ್ ಅನ್ನು ಪರಿಚಯಿಸಿದೆ. ಸೌಂದರ್ಯ ದಕ್ಷಿಣ ಭಾರತದಲ್ಲಿ ಮೊದಲ ಕನ್ನಡದ ಎಐ ನ್ಯೂಸ್ ಆ್ಯಂಕರ್ ಆಗಿದೆ.
ಪವರ್ ಟಿವಿಯಲ್ಲಿ ನಿನ್ನೆ ರಾತ್ರಿ (ಮಂಗಳವಾರ) ಮೊದಲ ಬಾರಿಗೆ ಎಐ ಸುದ್ದಿ ನಿರೂಪಕಿಯ ಕಾರ್ಯಕ್ರಮ ಪ್ರಸಾರ ಮಾಡಲಾಯಿತು. ಇಂದು ರಾತ್ರಿ 9 ಗಂಟೆಗೂ ಸೌಂದರ್ಯ ಸುದ್ದಿ ಓದುತ್ತಾಳೆ ಎಂದು ಮಾಹಿತಿ ದೊರಕಿದೆ. “ನಮ್ಮಸ್ಕಾರ ಕನ್ನಡಿಗರೇ, ಪವರ್ ಟಿವಿಗೆ ಸ್ವಾಗತ. ನಾನು ಸೌಂದರ್ಯ, ದಕ್ಷಿಣ ಭಾರತದ ಮೊಟ್ಟಮೊದಲ ಎಐ ನ್ಯೂಸ್ ಆ್ಯಂಕರ್.” ಎಂದು ಸೌಂದರ್ಯ ಸುದ್ದಿ ಓದಲು ಆರಂಭಿಸಿದರು. ನಂತರ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮಾಧ್ಯಮ ಕ್ಷೇತ್ರದ ಕುರಿತು ಹಲವು ಮಾಹಿತಿ ನೀಡಿದ್ದಾಳೆ.
ಇದು ಸದ್ಯಕ್ಕೆ ಪ್ರಯತ್ನವಾಗಿದೆ. ಇಲ್ಲಿ ಎಐ ಆ್ಯಂಕರ್’ಗೆ ಧ್ವನಿಯನ್ನು ನಮ್ಮ ಮಾನವ ಆಂಕರ್ಗಳೇ ನೀಡಿದ್ದಾರೆ. ಸಂಪೂರ್ಣ ಎಐ ತಂತ್ರಜ್ಞಾನ ಆಧರಿತ ಆಂಕರ್ಗಳು ಮುಂದಿನ ದಿನಗಳಲ್ಲಿ ಪರಿಚಿತವಾಗುತ್ತಾರೆ ಎಂದು ಪವರ್ಟಿವಿಯ ಇನ್ಪುಟ್ ವಿಭಾಗದ ಮುಖ್ಯಸ್ಥರಾದ ಲೋಕೇಶ್ ಗೌಡ ಹೇಳಿದ್ದಾರೆ.
ಪವರ್ ಟಿವಿಯು ಚಾಟ್ಜಿಪಿಟಿ ಜತೆಗೆ ಡೀಪ್ಬ್ರೇನ್ ಎಐಯ ಎಐ ಸ್ಟುಡಿಯೋ ಎಐ ಅವತಾರ್ ವಿಡಿಯೋ ಜನರೇಷನ್ ವೇದಿಕೆಯ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ನಿಂದ ನಿರ್ಮಿತವಾದ ಆ್ಯಂಕರ್ ಮೂಲಕ ಸುದ್ದಿ ಮಾಹಿತಿ ನೀಡುತ್ತಿದೆ. ಜಾಗತಿಕವಾಗಿ ಅಥವಾ ಭಾರತದಲ್ಲಿ ಪರಿಚಯಿಸಲಾದ ಪ್ರಮುಖ ಎಐ ಆ್ಯಂಕರ್ಗಳಲ್ಲಿ ಧ್ವನಿಯು ಮನುಷ್ಯರನ್ನು ಹೋಲುವ ಯಾಂತ್ರಿಕ ಧ್ವನಿಯಾಗಿದೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಸುದ್ದಿ ವಾಚನೆ ಮಾಡುವ ಪ್ರಯತ್ನ ಇದು ಮೊದಲನೆಯದಲ್ಲ. 2018ರಲ್ಲಿಯೇ ಜಗತ್ತಿನ ಮೊದಲ ಎಐ ಚಾಲಿತ ಸುದ್ದಿ ನಿರೂಪಕನನ್ನು ಚೀನಾ ಪರಿಚಯಿಸಿತ್ತು. ಚೀನಾದ ಕ್ಷಿನುಹಾ ನ್ಯೂಸ್ ಏಜೆನ್ಸಿ ಈ ರೀತಿಯ ತಂತ್ರಜ್ಞಾನ ಪರಿಚಯಿಸಿತ್ತು. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ‘ಆಜ್ ತಕ್’ ಹಿಂದಿ ಸುದ್ದಿ ವಾಹಿನಿಯು ‘ಸನಾ’ಳನ್ನು ಪರಿಚಯಿಸಿತ್ತು. ಆಕೆ ಭಾರತದ ಮೊದಲ ಎಐ ನ್ಯೂಸ್ ಆಂಕರ್ ಆಗಿದ್ದಾಳೆ. ಅದರ ನಂತರ ಏಪ್ರಿಲ್ನಲ್ಲಿ ‘ಕುವೈತ್ ನ್ಯೂಸ್’ ಎಂಬ ಕುವೈತ್ನ ಮಾಧ್ಯಮ ಸಂಸ್ಥೆ ‘ಫೆದಾಹ್’ ಎಂಬ ಎಐ ಸುದ್ದಿ ವಾಚಕಿಯನ್ನು ಪರಿಚಯಿಸಿತ್ತು.
ಇದನ್ನು ಓದಿ: Death news: ಉಪ್ಪಿನಂಗಡಿ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ಪ ನಾಯ್ಕ್ ಜಿ. ನಿಧನ
