AI Smart Cooking: ಮನೆಯ ಹೆಂಗಸರಿಗೆ ಪ್ರತಿದಿನ ಅಡುಗೆ ಮಾಡಿ ಮಾಡಿ ಬೇಸತ್ತು ಹೋಗಿರುತ್ತಾರೆ. ಬೆಳಿಗ್ಗೆ ತಿಂಡಿ, ಮದ್ಯಾಹ್ನ ಊಟ, ಸಂಜೆ ಮತ್ತೆ ತಿಂಡಿ, ರಾತ್ರಿ ಊಟ ಈ ಎಲ್ಲಾ ಅಡುಗೆಯನ್ನು ಮಾಡಿ ಮಾಡಿ ಕೊನೆಗೆ ಅಡುಗೆ ಮಾಡೋದಕ್ಕೆ ಜಿಗುಪ್ಸೆ ಬಂದು ಬಿಡುತ್ತೆ. ಕೆಲವರಂತೂ ಅಡುಗೆ ಮಾಡೋದಕ್ಕೆ ಉದಾಸೀನವಾಗಿ ಥಟ್ ಅಂತ ರೆಡಿ ಆಗೋ ಮ್ಯಾಗಿ ಮಾಡಿ ತಿನ್ನುತ್ತಾರೆ. ಆದರೆ, ಇನ್ನು ಮುಂದೆ ಮ್ಯಾಗಿ ಮಾತ್ರ ಅಲ್ಲ ಅಡುಗೆ ಕೂಡ ಕೈ ಬಳಕೆ ಇಲ್ಲದೆ ಥಟ್ ಅಂತ ರೆಡಿ ಆಗುತ್ತೆ.
ಹೌದು, ಇದೀಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ( AI Smart Cooking) ಆಧರಿಸಿ ಅಡುಗೆ ಮಾಡೋ ಮಷಿನ್ ಬಂದಿದೆ. ಈ ಮಷಿನ್ ಬೆಲೆ 21,999 ರೂಪಾಯಿ. ಆಗಿದೆ. ಇದು ಬರೋಬ್ಬರಿ 250ಕ್ಕೂ ಹೆಚ್ಚು ವಿಧದ ರುಚಿಯಾದ ಖಾದ್ಯಗಳನ್ನು ತಯಾರಿಸುತ್ತೆ!. ಅನ್ನ, ಸಾಂಬಾರ್, ರೊಟ್ಟಿ, ಪಿಸ್ತಾ, ಪಾಸ್ತಾ, ಬಿರಿಯಾನಿ, ನೂಡಲ್ಸ್ ಸೇರಿದಂತೆ 250ಕ್ಕೂ ಹೆಚ್ಚು ಅಡುಗೆ ಮಾಡಿಕೊಡುತ್ತೆ ಡೆಲಿಷ್ ಅಪ್ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್. ಈ ಎಐ ಮೆಷಿನ್ ಇನ್ನು ಮಹಿಳೆಯರಿಗೆ ವಿಶ್ರಾಂತಿ ಒದಗಿಸುತ್ತದೆ.
ಈ ಮೆಷಿನ್ ನಲ್ಲಿ ನಿಮಗೆ ಯಾವ ತಿಂಡಿ ಬೇಕು ಎಂದು ಆಯ್ಕೆ ಮಾಡಿ ತರಕಾರಿಗಳನ್ನು ಸೇರಿಸಿ. ಸ್ಟಾರ್ಟ್ ಒತ್ತಿ ಸಾಕು, ಮುಂದೆ ಅದೇ ಕಟ್ ಮಾಡಿ, ಕುದಿಸಿ ಬೇಯಿಸಿ, ರುಚಿಯಾದ ಅಡುಗೆ ತಯಾರಿಸುತ್ತೆ. ಅಷ್ಟೇ ಅಲ್ಲ ನಿಮಗೆ ರೆಸಿಪಿ ಬಗ್ಗೆ ಏನೇ ಅನುಮಾನ ಇದ್ರೂ ಎಐ ಮಷಿನ್ ಉತ್ತರ ಕೊಡುತ್ತೆ.
ಮಾಹೆಕ್ ಮತ್ತು ಮೋಜಿತ್ ಎಂಬುವವರು upliance.ai ಕಂಪನಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದು, ಇವರ ಈ ಎಐ ಅಡುಗೆ ಮಷಿನ್ ಪ್ರತೀ ಶುಕ್ರವಾರ ಹೊಸ ರುಚಿಯೊಂದನ್ನು ಕಲಿಯುತ್ತದೆ.
ಜೊತೆಗೆ ಆಯಾ ಸೀಸನ್ ಆಧರಿಸಿ ರೆಸಿಪಿಗಳನ್ನು ಫೀಡ್ ಮಾಡಲಾಗುತ್ತದೆ. ನೀವು ವೆಜ್ ಅಥವಾ ನಾನ್ ವೆಜ್ ಎಂಬುದನ್ನು ತಿಳಿದುಕೊಂಡೇ ರೆಸಿಪಿಗಳನ್ನು ತೆರೆದಿಡುತ್ತದೆ.
ಇದನ್ನು ಓದಿ: Tamilnadu: ಬೆಳ್ಳಿಗೆ ಸಿಕ್ಕಿದೆ ಚಿನ್ನದಂಥಾ ಕೆಲ್ಸ: ದಿ ಎಲಿಫೆಂಟ್ ವಿಸ್ಪರ್ಸ್ ಕಾವಾಡಿಗೆ ಒಲಿದ ಸರ್ಕಾರಿ ಕೆಲಸ
