Bakrid: ಬೆಂಗಳೂರಿನ (Bengaluru) ಈದ್ಗಾ ಮೈದಾನದಲ್ಲಿ ತ್ಯಾಗ ಬಲಿದಾನ ಸಂಕೇತವಾದ ʻಬಕ್ರೀದ್ ಹಬ್ಬʼ (Bakrid) ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಸದ್ಯ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿ, ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭ ಕೋರಿದ್ದಾರೆ.
ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ʻಬಕ್ರೀದ್ ಹಬ್ಬʼ ವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಬಕ್ರೀದ್ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದ್ದು, ಇದು ಇಬ್ರಾಹಿಂನ ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ಈ ಬಾರಿ ಬಕ್ರೀದ್ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ.
ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಸ್ವಾಗತಿಸಿ, ಸನ್ಮಾನಿಸಿದ್ದಾರೆ. ಸಿದ್ರಾಮಯ್ಯ ಕಪ್ಪು ಟೋಪಿ ಧರಿಸಿ ಬಕ್ರೀದ್ ಹಬ್ಬದಲ್ಲಿ ಭಾಗಿಯಾಗಿರುವ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಜ್ಯದಲ್ಲಿ ಗೆಲುವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿದ ಬಾದ್ ಷಾ ಸಿದ್ರಾಮಯ್ಯ ಇದೀಗ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ಬಕ್ರೀದ್ ನಲ್ಲಿ ಭಾಗಿಯಾಗಿದ್ದಾರೆ. ಕಪ್ಪು ಟೋಪಿ ಧರಿಸಿ, ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭ ಕೋರಿದ್ದಾರೆ.
