ಬ್ಯಾಂಕ್ ಉದ್ಯೋಗಿಗಳು: ಬ್ಯಾಂಕ್ ಉದ್ಯೋಗಿಗಳ (ಬ್ಯಾಂಕ್ ಉದ್ಯೋಗಿಗಳು) ಬಹುನಿರೀಕ್ಷಿತ ಬೇಡಿಕೆಯಾಗಿರುವ ವಾರಕ್ಕೆ ಎರಡು ದಿನ ರಜೆ ಸೌಲಭ್ಯ (2 ವಾರದ ರಜೆಗಳು) ವಾರಕ್ಕೆ ಐದು ದಿನ ಕೆಲಸ, 2 ವೀಕಾಫ್ ಸೌಲಭ್ಯ ಸೌಲಭ್ಯದ ಕೆಲವು ವಿಚಾರಗಳ ಬಗ್ಗೆ ತಿಳಿಸಲಾಗಿದೆ.
ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (UFBU) ಸಂಘಟನೆ ಬ್ಯಾಂಕ್ ಕಾರ್ಯದಿನಗಳ ವಿಚಾರದ ಬಗ್ಗೆ ಈ ಹಿಂದೆ ಐಬಿಎ ಮಾತುಕತೆ ನಡೆಸಿದ್ದು ಜುಲೈ 19 ರಂದು ತಿಳಿಸಲಾಗಿದೆ. ಬ್ಯಾಂಕ್‌ನ ವಾರದ ಕಾರ್ಯದಿನಗಳನ್ನು ಐದಕ್ಕೆ ಇಳಿಸುವ ವಿಚಾರವನ್ನು ಪರಿಗಣಿಸಿ, ಸಂಬಂಧಿತರೊಂದಿಗೆ ಮಾತನಾಡುತ್ತ ಕಂಪನಿ ಐಬಿಎ ತನಗೆ ತಿಳಿಸಿದ್ದಾಗಿ ಬ್ಯಾಂಕುಗಳ ವೇದಿಕೆ ಸ್ಪಷ್ಟಪಡಿಸಿದೆ.
ಈ ವೇಳೆ ಬ್ಯಾಂಕ್ ಯೂನಿಯನ್‌ಗಳು ಮತ್ತು ಐಬಿಎ ಮಧ್ಯೆ ಸಭೆ ನಡೆಯಲಿದೆ, ಈ ವೇಳೆ ವಾರಕ್ಕೆ ಐದು ದಿನ ಕೆಲಸ, ಸಂಬಳ ಹೆಚ್ಚಳ, ನಿವೃತ್ತರಿಗೆ ಗ್ರೂಪ್ ಇನ್‌ಶೂರೆನ್ಸ್ ಮೊದಲಾದ ಸಂಗತಿಗಳನ್ನು ಚರ್ಚಿಸಲಾಗಿದೆ.
ಸದ್ಯ ಬ್ಯಾಂಕ್ ಉದ್ಯೋಗಿಗಳ ಬೇಡಿಕೆಯಾದ ವಾರಕ್ಕೆ ಎರಡು ದಿನ ರಜೆ ಸೌಲಭ್ಯ (2 ವಾರದ ರಜೆಗಳು) ವಾರಕ್ಕೆ ಐದು ದಿನದ ಕೆಲಸ, 2 ವೀಕಾಫ್ ಸೌಲಭ್ಯದ ಕೆಲವು ವಿಚಾರಗಳ ಬಗ್ಗೆ ಭಾರತೀಯ ಬ್ಯಾಂಕಿಂಗ್ ಸಂಸ್ಥೆ (IBA- ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್) ಜುಲೈ 28 ರಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಕುರಿತು ಬ್ಯಾಂಕ್ ಯೂನಿಯನ್‌ಗಳು ಮತ್ತು ಐಬಿ ಮಧ್ಯದಲ್ಲಿ ಜುಲೈ 28 ರಂದು ಸಭೆ ನಡೆಯಲಿದೆ.
ಒಂದು ವೇಳೆ ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ವೀಕಾಫ್ ಕೊಡುವುದಾದರೆ ದಿನದಲ್ಲಿ ಅವರ ಕೆಲಸದ ಅವಧಿಯನ್ನು 40 ನಿಮಿಷಗಳಷ್ಟು ವಿಸ್ತರಿಸುವಂತಹ ಸಲಹೆ ಸರ್ಕಾರಕ್ಕೆ ಐಬಿಎ ಕೊಟ್ಟಿರುವುದು.
ಒಟ್ಟಿನಲ್ಲಿ ಬ್ಯಾಂಕುಗಳಿಗೆ ವಾರಕ್ಕೊಮ್ಮೆ ರಜೆ ಇದೆ. ತಿಂಗಳಿಗೆ ಎರಡು ಶನಿವಾರಗಳೂ ರಜೆ ಇವೆ. ಅಲ್ಲಿಗೆ ಒಂದು ತಿಂಗಳಿನಲ್ಲಿ ಬ್ಯಾಂಕುಗಳಿಗೆ ವಾರದ ರಜೆಗಳ ಸಂಖ್ಯೆ 6 ರಿಂದ 7 ಆಗುತ್ತದೆ. ಈಗ ವಾರಕ್ಕೆ ಎರಡು ಆಫ್ ಸಿಕ್ಕರೆ ಗ್ಯಾರಂಟಿ ರಜೆಯ ಸಂಖ್ಯೆ 8 ರಿಂದ 10ಕ್ಕೆ ಹೋಗುತ್ತದೆ.
ಇದನ್ನು ಓದಿ: ಉಡುಪಿ: ಕಾಲೇಜು ವಿದ್ಯಾರ್ಥಿನಿಯರಿಂದ ಇದೆಂಥ ಕೃತ್ಯ!! ಶೌಚಾಲಯದ ವಿಡಿಯೋ ವೈರಲ್ ಆಗ್ತಿದ್ದಂತೆ ಯುವತಿಯರ ಮೇಲೆ ಕ್ರಮ
