Home » Bengaluru News: ತಪ್ಪಿದ ಭಾರೀ ವಿಮಾನ ದುರಂತ, ತುರ್ತು ಭೂ ಸ್ಪರ್ಶ !

Bengaluru News: ತಪ್ಪಿದ ಭಾರೀ ವಿಮಾನ ದುರಂತ, ತುರ್ತು ಭೂ ಸ್ಪರ್ಶ !

0 comments
Bengaluru News

Bengaluru News: ಬೆಂಗಳೂರಿನ( Bengaluru News) ಹೆಚ್ಎಎಲ್​​(HAL) ಏರ್​ಪೋರ್ಟ್​ನಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದೆ(EMERGENCY LANDING). ತಾಂತ್ರಿಕ ದೋಷ ಕಂಡು ಬಂದ ನಂತರ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಪರೇಟಿಂಗ್ ವಿಮಾನ ಟೇಕ್​​ ಆಫ್(Take off) ಆದ ನಂತರ ತಾಂತ್ರಿಕ ದೋಷ ಕಂಡ ಹಿನ್ನೆಲೆ ಮತ್ತೆ ಹೆಚ್​ಎಲ್​​​​ನಲ್ಲೇ ವಿಮಾನ ಲ್ಯಾಂಡ್​​ ಆಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಮಾತ್ರ ಇದ್ದು ಯಾವುದೇ ಪ್ರಯಾಣಿಕರಿಲ್ಲ ಪ್ರಯಾಣಿಕರಿರಲಿಲ್ಲ. ಸದ್ಯ ಇವರಿಬ್ಬರಿಗೆ ಯಾವುದೇ ಪ್ರಾಣಪಾಯವಾಗದೆ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

HAL ನಿಂದ ಟೇಕ್ ಆಫ್ ಆಗಿ BIALಗೆ ಹೊರಟಿದ್ದ VT-KBN ಹೆಸರಿನ 1A ವಿಮಾನದ ಮುಂಭಾಗದ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ತುರ್ತಾಗಿ HALನಲ್ಲೇ ಭೂಸ್ಪರ್ಶ ಮಾಡಿದೆ. ಎಂದು ವರದಿಗಳು ತಿಳಿಸಿವೆ.

ಆಘಾತಕಾರಿ ವಿಚಾರವೆಂದರೆ, ಸೇನಾ ವಿಮಾನವನ್ನು ಕೇವಲ ಎರಡೇ ಚಕ್ರಗಳಲ್ಲಿ ಲ್ಯಾಂಡ್ ಮಾಡಲಾಯಿತು. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದ್ದನ್ನು ಕಂಡು ಹೆಚ್‌ಎಎಲ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

You may also like

Leave a Comment