SBI bank on Whatsap: SBI ಗ್ರಾಹಕರೇ, ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಇನ್ಮುಂದೆ SBI ನಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವವರು ತಮ್ಮ ಅಕೌಂಟ್ನ ಸಂಪೂರ್ಣ ಮಾಹಿತಿಯನ್ನು ವಾಟ್ಸಾಪ್ನಲ್ಲೇ ನೋಡಬಹುದು. ನೀವೂ ಮನೇಲೇ ಕೂತು ವಾಟ್ಸಪ್ ಮೂಲಕ SBI ಬ್ಯಾಂಕಿಂಗ್ ವ್ಯವಹಾರ (SBI bank on Whatsap) ಮಾಡ್ಕೋಬೇಕಾ ?! ಹಾಗಾದ್ರೆ ಈ ಮಾಹಿತಿ ಓದಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ವಾಟ್ಸಪ್ ಮೂಲಕ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು, ಅವರ ಮಿನಿ ಸ್ಟೇಟ್‌ಮೆಂಟ್ ಅನ್ನು ಪರಿಶೀಲಿಸಬಹುದು. ಪಿಂಚಣಿ ಸ್ಲಿಪ್ ಸೇವೆಯನ್ನು ಪಡೆಯಬಹುದು. ಸಾಲ, ಉಳಿತಾಯ ಮತ್ತು ಠೇವಣಿ, NRI ಸೇವೆ, ತ್ವರಿತ ಖಾತೆ ತೆರೆಯುವಿಕೆ, ಸಂಪರ್ಕ ಮತ್ತು ದೂರು, ಪೂರ್ವ-ಅನುಮೋದಿತ ಸಾಲಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಡಿಜಿಟಲ್ ಬ್ಯಾಂಕಿಂಗ್, ಬ್ಯಾಂಕಿಂಗ್ ಫಾರ್ಮ್ ಡೌನ್‌ಲೋಡ್, ರಜಾದಿನದ ಕ್ಯಾಲೆಂಡರ್, ಡೆಬಿಟ್ ಕಾರ್ಡ್ ಬಳಕೆಯ ವಿವರಗಳು, ಕಳೆದುಹೋದ ಅಥವಾ ಕದ್ದ ಕಾರ್ಡ್‌ಗಳ ಮುಚ್ಚುವಿಕೆ ಮತ್ತು ಹತ್ತಿರದ ಎಟಿಎಂ ಅನ್ನು ಪತ್ತೆ ಮಾಡಬಹುದು.
ವಾಟ್ಸಪ್ ನಲ್ಲಿ ಅಕೌಂಟ್ನಲ್ಲಿನ ಹಣ ಚೆಕ್ ಮಾಡೋದು ಹೇಗೆ?
• ವಾಟ್ಸಾಪ್ನಲ್ಲಿ ಹಣ ಚೆಕ್ ಮಾಡಲು, ನೀವು ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು.
• ನೋಂದಾವಣೆಗೆ ನೀವು ಬ್ಯಾಂಕ್‌ಗೆ (bank) ಯಾವ ಮೊಬೈಲ್ (mobile) ನಂಬರ್ ನೀಡಿರುತ್ತೀರಾ ಆ ಮೊಬೈಲ್ ಸಂಖ್ಯೆಯಿಂದ 917208933148 ಗೆ “SMS WAREG A/c No” ಈ ರೀತಿ ಟೈಪ್ ಮಾಡಿ ಕಳುಹಿಸಬೇಕು.
• ನಂತರ ಅಲ್ಲಿ ಅಕೌಂಟ್ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್, ವಾಟ್ಸಾಪ್ ಬ್ಯಾಂಕಿಂಗ್‌ನಿಂದ ಡಿ–ರಿಜಿಸ್ಟರ್ ಮಾಡಿ ಎಂಬ ಆಯ್ಕೆಗಳು ಇರುತ್ತದೆ.
• ನಿಮಗೆ ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳಬೇಕೆಂದಾದರೆ
ಒಂದನ್ನು ಟೈಪ್ ಮಾಡಿ ಸೆಂಡ್ ಮಾಡಿ. ಆಗ ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದರ ಮಾಹಿತಿ ಲಭ್ಯವಾಗುತ್ತದೆ.
SBI WhatsApp ಬ್ಯಾಂಕಿಂಗ್ ಸೇವೆಯ ಲಾಭ ಪಡೆಯುವುದು ಹೇಗೆ ?!
• SBI ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ +917208933148 ಗೆ WAREG ಖಾತೆ ಸಂಖ್ಯೆಯನ್ನು ಟೈಪ್ ಮಾಡಿ, ಸಂದೇಶವನ್ನು ಕಳುಹಿಸಿ.
• ನಿಮ್ಮ ನೋಂದಣಿ ಯಶಸ್ವಿಯಾದರೆ ನಿಮ್ಮ WhatsApp ಸಂಖ್ಯೆಗೆ ಸಂದೇಶ ಬರುತ್ತದೆ.
• ನೀವು ನಿಮ್ಮ WhatsApp ಸಂಖ್ಯೆಯಿಂದ +919022690226 ಗೆ ಹಾಯ್ ಅನ್ನು ಕಳುಹಿಸಬೇಕು.
• ನಂತರ ನೀವು ಚಾಟ್‌ಬಾಟ್‌ನಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಬೇಕು.
