Child girl-Chicken video: ಮಕ್ಕಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಕೆಲವೊಮ್ಮೆ ಮಕ್ಕಳ ಚೇಷ್ಟೆ ಮತ್ತು ಅವರ ತೊದಲು ನುಡಿಗಳನ್ನು ಬಳಕೆದಾರರು ಆಸಕ್ತಿಯಿಂದ ನೋಡುತ್ತಾರೆ. ಇದೀಗ ಮುದ್ದು ಮುದ್ದಾದ ಮಗುವಿನ ಒಂದು ವಿಡಿಯೋ (Child girl-Chicken video) ವೈರಲ್ ಆಗಿದ್ದು, ಇದನ್ನು ನೀವು ನೋಡಿದ್ರೆ ನೋಡ್ತಾನೆ ಇರ್ಬೇಕು ಅನ್ನಿಸುತ್ತೆ. ಅಷ್ಟು ಮುದ್ದಾಗಿದೆ ಆ ವಿಡಿಯೊದಲ್ಲಿನ ದೃಶ್ಯ.
ವೈರಲ್ ಆದ ಈ ವಿಡಿಯೋದಲ್ಲಿ, ಮುದ್ದಾದ ಈ ಪುಟ್ಟ ಹುಡುಗಿ ಕೋಳಿಯೊಂದರ ಕಾಲುಗಳಿಗೆ ನೇಲ್ ಪಾಲಿಶ್ ಹಚ್ಚುತ್ತಿರುವುದನ್ನು ಕಾಣಬಹುದು. ಮುದ್ದಾದ ಫ್ರಾಕ್ ಧರಿಸಿ ನೆಲದ ಮೇಲೆ ಕುಳಿತಿರುವ ಪುಟ್ಟ ಹುಡುಗಿ ಕೋಳಿ ಕಾಲಗಳನ್ನು ನೇಲ್ ಪಾಲಿಶ್ ನಿಂದ ಸಿಂಗರಿಸುತ್ತಿದ್ದಾಳೆ. ಕೋಳಿ ಕೂಡ ತುಟಿಕ್ ಪಿಟಿಕ್ ಎನ್ನದೆ ನೇಲ್ ಪಾಲಿಶ್ (Nail polish) ಹಚ್ಚಿಸಿಕೊಳ್ಳುತ್ತಿದೆ. ಮರೂನ್ ಬಣ್ಣದ ನೇಲ್ ಪಾಲಿಶ್ ಹಚ್ಚುವ ಹುಡುಗಿ ಕೋಳಿಯ(chicken) ಕಾಲಿನ ಅಂದವನ್ನು ಹೆಚ್ಚಿಸಿದ್ದಾಳೆ.
ಸದ್ಯ ಈ ಎರಡು ಮುಗ್ಧಜೀವಿಗಳ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಕೋಳಿ ಮತ್ತು ಮಗುವಿನ ನಡುವಿನ ಈ ಸ್ನೇಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. @TheFigen_ ಎನ್ನುವ ಟ್ವಿಟರ್ ಬಳಕೆದಾರರು ಈ ವಿಡಿಯೊವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʼಮುಗ್ಧ ಜೀವಿಗಳಷ್ಟೇ ಈ ಇಬ್ಬರ ಭಾಷೆಯನ್ನು ಅರಿಯಲು ಸಾಧ್ಯ. ಕೋಳಿಯು ಮಗುವಿನ ಮುಗ್ಧತೆಗೆ ಬೆರಗಾಗಿದೆʼ ಎಂಬ ಅರ್ಥದಲ್ಲಿ ಶೀರ್ಷಿಕೆ ಬರೆದುಕೊಂಡು ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಇನ್ನು ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ನಾನಾ ಬಗೆಯಲ್ಲಿ ಕಮೆಂಟ್ ಹಾಕಿದ್ದಾರೆ. ʼವಾವ್ ಕೋಳಿ ಉಗುರುಗಳ ಅಂದ ಹೆಚ್ಚಿತುʼ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ʼಸೋ ಕ್ಯೂಟ್ʼ ಎಂದಿದ್ದಾರೆ. ʼಮಾನವೀಯತೆ ಎನ್ನುವುದು ಒಂದು ಭಾಷೆ. ಅದು ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ. ಎಲ್ಲಾ ಜೀವಿಗಳು ಇದನ್ನು ಅರ್ಥ ಮಾಡಿಕೊಳ್ಳುತ್ತವೆ ಮತ್ತು ಪ್ರೀತಿಯನ್ನು ಒಪ್ಪಿಕೊಳ್ಳುತ್ತವೆʼ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
https://twitter.com/i/status/1683826359578005504
