Crime News: ಸೋದರ ಮಾವ ತನ್ನ ಸೊಸೆಯ ಮೇಲೆ ಅತ್ಯಾಚಾರ ಮಾಡಲು ಎಸಗಿದ ಘಟನೆಯೊಂದು ನಡೆದಿದ್ದು, ಇದರಿಂದ ಗಾಬರಿಗೊಂಡ ಸೊಸೆ ಸೋದರ ಮಾವನ ಪ್ರೈವೇಟ್ ಭಾಗಕ್ಕೆ ಬ್ಲೇಡ್‌ನಿಂದ ಗಾಯ ಮಾಡಿ ಕೊನೆಗೆ ನರಳುತ್ತಿದ್ದ ಆತನನ್ನು ಕೋಣೆಯಲ್ಲಿ ಬಿಟ್ಟು, ಬೀಗ ಜಡಿದು ಊರಿನ ಪ್ರಮುಖರನ್ನು ಕರೆದು ತರಲು ಹೋಗಿದ್ದಾಳೆ. ಅಷ್ಟರಲ್ಲಿ ಯುವಕ ಹೇಗೋ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಸಂತ್ರಸ್ತ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮದಿಂದ ಎಸ್ಕೇಪ್ ಆಗಲು ರೆಡಿಯಾಗಿದ್ದ ಯುವಕನನ್ನು ಬಂಧಿಸಿದ್ದಾರೆ.
ಈ ಘಟನೆ ಬಿಹಾರದ ಬಂಕಾ ಜಿಲ್ಲೆಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಈಗ ಭಾರೀ ಚರ್ಚೆಯಾಗುತ್ತಿದೆ. ಹಾಗೂ ಮಹಿಳೆಯ ಧೈರ್ಯವನ್ನು ಅಲ್ಲಿನ ಜನರು ಕೊಂಡಾಡುತ್ತಿದ್ದಾರೆ.
ವರದಿಯ ಪ್ರಕಾರ, ಮಹಿಳೆಯ ಮನೆಯಲ್ಲಿ ಗುರುವಾರ ಪತಿ ಮತ್ತು ಮಕ್ಕಳು ಇರಲಿಲ್ಲ. ರಾತ್ರಿ ಮನೆಯ ತಾರಸಿಯ ಬಾಗಿಲಿಗೆ ಬೀಗ ಹಾಕುವುದನ್ನು ಮರೆತು ಬಿಟ್ಟಿದ್ದಾಳೆ. ಆರೋಪಿ ಯುವಕ ಮನೆಯ ಮೇಲ್ಛಾವಣಿಯಿಂದ ಆಕೆಯ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನ ಪಟ್ಟಿದ್ದಾನೆ. ಕೂಡಲೇ ಮಹಿಳೆ ಹೇಗಾದರೂ ಮಾಡಿ ತನ್ನ ರಕ್ಷಣೆಗಾಗಿ ಆತನ ಪ್ರೈವೇಟ್ ಪಾರ್ಟ್‌ಗೆ ಬ್ಲೇಡ್‌ನಿಂದ ದಾಳಿ ಮಾಡಿದ್ದಾಳೆ. ಆರೋಪಿ ಕೂಡಲೆ ರಕ್ತಸ್ರಾವದಿಂದ ನರಳಲಾರಂಭಿಸಿದ್ದಾನೆ. ಕೂಡಲೇ ಮಹಿಳೆ ಮನೆಗೆ ಬೀಗ ಹಾಕಿ ಗ್ರಾಮದ ಜನರನ್ನು ಕರೆಯಲು ಹೋಗಿದ್ದಾಳೆ. ಈ ವೇಳೆ ಹೇಗೋ ಬಾಗಿಲಿನ ಚಿಲಕ ಹೊಡೆದು ಪರಾರಿಯಾಗಿದ್ದಾನೆ.
ಯುವಕನ ವಿರುದ್ಧ ಮಹಿಳೆ ಅತ್ಯಾಚಾರ ಯತ್ನಕ್ಕಾಗಿ ಲಿಖಿತ ದೂರು ನೀಡಿದ್ದಾಳೆ ಎಂದು ಬಂಕಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಂಭು ಹೇಳಿದ್ದಾರೆ. ಯುವಕನನ್ನು ತಕ್ಷಣ ಬಂಧನ ಮಾಡಿ, ಯುವಕನಿಗೆ ಸದರ್ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಂತರ ನ್ಯಾಯಾಂಗ ಬಂಧನದಲ್ಲಿಟ್ಟು ಜೈಲಿಗೆ ಕಳುಹಿಸಲಾಗಿದೆ.
