Home » Delhi: ದೇವಾಲಯದ ಪ್ರಸಾದ ತಿಂದನೆಂದು ಮುಸ್ಲಿಂ ವಿಶೇಷಚೇತನ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪಾಪಿಗಳು !! ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ

Delhi: ದೇವಾಲಯದ ಪ್ರಸಾದ ತಿಂದನೆಂದು ಮುಸ್ಲಿಂ ವಿಶೇಷಚೇತನ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪಾಪಿಗಳು !! ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ

1 comment
Delhi

Delhi: ದೆಹಲಿಯ(Delhi)ಸುಂದರ್ ನಗರಿ ಪ್ರದೇಶದಲ್ಲಿ ದೇವಸ್ಥಾನದಲ್ಲಿ ವಿಕಲಚೇತನ ಮುಸ್ಲಿಂ ವ್ಯಕ್ತಿ ಪ್ರಸಾದ ಸೇವಿಸಿದನೆಂಬ ಕಾರಣಕ್ಕೆ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿದ್ದು, ಇದರಿಂದ ವ್ಯಕ್ತಿ ಮೃತಪಟ್ಟ (Death)ಘಟನೆ ವರದಿಯಾಗಿದೆ.

ಸೆ.26 ರಂದು ಅಂದರೆ ಮಂಗಳವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಕಲಚೇತನನಾದ ಮೊಹಮ್ಮದ್ ಇಸಾರ್ ಎಂಬಾತ ದೆಹಲಿಯ ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿದ್ದಾನೆ. ಹೀಗಾಗಿ, ಕೆಲವರು ಇಸಾರನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಪರಿಣಾಮ ಕೆಲ ಸಮಯದಲ್ಲೇ ಇಸಾರ್‌ ಅಸುನೀಗಿದ್ದಾನೆ ಎನ್ನಲಾಗಿದೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿದ್ದು, ಗುಂಪೊಂದು ವ್ಯಕ್ತಿಯನ್ನು ಕೋಲುಗಳಿಂದ ಹಲ್ಲೆ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಪ್ರಕರಣದ ಕುರಿತಂತೆ ಪೊಲೀಸರು ಶಂಕಿತರನ್ನು ಬಂಧಿಸಿದ್ದಾರೆ. ಇದರ ನಡುವೆ ಮೊಬೈಲ್‌ ನಲ್ಲಿ ವೀಡಿಯೋ ಚಿತ್ರೀಕರಿಸುತ್ತಿದ್ದವರನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯವನ್ನು(CCTV Footage)ಪರಿಶೀಲನಾ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೂ ಘಟನಾ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.

 

ಇದನ್ನು ಓದಿ: Delhi: ದೇವಾಲಯದ ಪ್ರಸಾದ ತಿಂದನೆಂದು ಮುಸ್ಲಿಂ ವಿಶೇಷಚೇತನ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪಾಪಿಗಳು !! ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ

You may also like

Leave a Comment