Home » Delhi: ಹುಡುಗಿಯ ಪಿಜಿ ಎದುರು ಹಸ್ತಮೈಥುನ ಮಾಡಿಕೊಂಡ ಯುವಕ..! ವಿಡಿಯೋ ವೈರಲ್, ಕಠಿಣ ಕ್ರಮಕ್ಕೆ ಆಗ್ರಹ !!

Delhi: ಹುಡುಗಿಯ ಪಿಜಿ ಎದುರು ಹಸ್ತಮೈಥುನ ಮಾಡಿಕೊಂಡ ಯುವಕ..! ವಿಡಿಯೋ ವೈರಲ್, ಕಠಿಣ ಕ್ರಮಕ್ಕೆ ಆಗ್ರಹ !!

by ಹೊಸಕನ್ನಡ
0 comments
Delhi

ಇತ್ತೀಚೆಗೆ ಲೇಡೀಸ್ ಹಾಸ್ಟೆಲ್(Ladies hostel)ಎದುರು, ಹುಡುಗಿಯರ ಪಿಜಿ(Girls PG)ಮುಂದೆ ಕೆಲ ಪುರುಷರು, ಯುವಕರು ಅಸಭ್ಯವಾಗಿ ವರ್ತಿಸುವಂತಹ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ಇಂತದೇ ಒಂದು ಅಘಾತಕಾರಿ ಪ್ರಕರಣ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಹೌದು, ದೆಹಲಿ ಲೇಡಿಸ್​ ಪಿಜಿ(Delhi girls pg)ಎದುರು ಯೈವಕನೊಬ್ಬ ಹಸ್ತಮೈಥುನ ಮಾಡಿಕೊಳ್ಳತ್ತಿರುವ ಅಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ(National capital) ದೆಹಲಿಯಲ್ಲಿ ನಡೆದಿದೆ. ಅಂದಹಾಗೆ ಈ ಘಟನೆಯು ಉತ್ತರ ದೆಹಲಿ ಭಾಗದ ಪಿಜಿ ಒಂದರ ಮುಂಭಾಗ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವಿಡಿಯೋ ಜೊತೆ, ಘಟನೆಯ ಕುರಿತು ಟ್ವೀಟ್(tweet) ಮಾಡಿ ಪ್ರತಿಕ್ರಿಯಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್​(Swathi malivaĺ) ಲೇಡಿಸ್​ ಪಿಜಿ ಮುಂಭಾಗ ಅಸಭ್ಯವಾಗಿ ವರ್ತಿಸಿದ ಯುವಕನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದು, ದೆಹಲಿಯ ಸುತ್ತ ನಡೆಸುತ್ತಿರುವ ಪಿಜಿಗಳಲ್ಲಿ ಸಾವಿರಾರು ಮಹಿಳೆಯರು ವಾಸಿಸುತ್ತಿದ್ದಾರೆ. ಅವರ ಸುರಕ್ಷತೆಯೇ ಅತ್ಯಂತ ನಿರ್ಣಾಯಕವಾಗಿದೆ. ವಿಡಿಯೋದಲ್ಲಿ ಕಾಣುತ್ತಿರುವ ವ್ಯಕ್ತಿಯೂ ಹಲವು ಬಾರಿ ಅಸಭ್ಯವಾಗಿ ವರ್ತಿಸಿದ್ದಾನೆ. ಎಂದು ಆರೋಪಿಸಿದ್ದಾರೆ.

ಅಲ್ಲದೆ ದೆಹಲಿಯಲ್ಲಿ ಈ ರೀತಿ ಅಪರಾಧಿಗಳು ಹೇಗೆ ಧ್ಯರ್ಯವಾಗಿ ಓಡಾಡುತ್ತಾರೆ. ಪೊಲೀಸರು(Police) ಇಂತಹವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಅಪರಾಧಗಳನ್ನು ತಡೆಯಲು ಪೊಲೀಸರು ಆರೋಪಿಗಳ ವಿರುದ್ಧ FIR ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಟ್ವೀಟ್​ ಮಾಡಿ ಆಗ್ರಹಿಸಿದ್ದಾರೆ.

 

You may also like

Leave a Comment