Kumta Rain: ನಿನ್ನೆ (ಜೂನ್ 26) ಸಂಜೆ ಧಾರಾಕಾರವಾಗಿ ಸುರಿದ ಮಳೆಯಿಂದ ಗುಡ್ಡ ಕುಸಿದು ಮನೆ ಮೇಲೆ ಬಂಡೆ ಕಲ್ಲು ಅಪ್ಪಳಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ (Kumta Rain) ರಾಷ್ಟ್ರೀಯ ಹೆದ್ದಾರಿ 66ರ ತಂಡ್ರಕುಳಿ ಗ್ರಾಮದಲ್ಲಿ ನಡೆದಿದೆ. ಗುಡ್ಡ ಮನೆಗೆ ಹೊಂದಿಕೊಂಡಿತ್ತು. ಹಾಗಾಗಿ ಗುಡ್ಡ ಕುಸಿದಾಗ ಬಂಡೆಗಲ್ಲು ನೇರವಾಗಿ ಮನೆ ಮೇಲೆಯೇ ಬಿದ್ದಿದೆ.
ಗಣೇಶ ತುಳಸು ಅಂಬಿಗ ಎಂಬುವರ ಮನೆಗೆ ಬೃಹತ್ ಗಾತ್ರದ ಬಂಡೆಗಲ್ಲು ಅಪ್ಪಲಿಸಿದ್ದು, ಘಟನೆ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ಮನೆಯವರು ಮನೆಯೊಳಗೇ ಇದ್ದರೂ ಅದೃಷ್ಟವಶಾತ್ ಎಲ್ಲರೂ ಬಚಾವ್ ಆಗಿದ್ದಾರೆ.
ಅಂದಹಾಗೆ ಆ ಮನೆಯಲ್ಲಿ ಜೂ.28ರಂದು ಮನೆಯಲ್ಲಿ ಮದುವೆ ಕಾರ್ಯ ನಿಗದಿಯಾಗಿತ್ತು. ಮದುವೆ ಕಾರ್ಯಕ್ರಮಕ್ಕೆಂದು ಸಿದ್ಧಗೊಂಡಿದ್ದ ಮನೆಯ ಮೇಲೆಯೇ ಬೃಹತ್ ಗಾತ್ರದ ಬಂಡೆಗಲ್ಲು ಅಪ್ಪಲಿಸಿದೆ. ಇದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.
