Odisha: ಸದ್ಯ ಟೊಮೆಟೋ (Tomato) ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರು ಟೊಮೆಟೋ ಕೊಳ್ಳಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಟೊಮೆಟೋ ಕಳ್ಳತನವೂ (tomato theft) ಹೆಚ್ಚಾಗಿದೆ. ಇದೀಗ ವ್ಯಕ್ತಿಯೋರ್ವ ಮಕ್ಕಳನ್ನು ಅಡವಿಟ್ಟು ಟೊಮ್ಯಾಟೋ ಖರೀದಿಸಿದ್ದು, ಇದರಿಂದ ಕೊನೆಗೆ ವ್ಯಾಪಾರಿ ಮೋಸ ಹೋದ ಘಟನೆ ಒಡಿಶಾದಲ್ಲಿ ನಡೆದಿದೆ.
ಶನಿವಾರ ಒಡಿಶಾದ (Odisha) ಕಟಕ್ ನಗರದಲ್ಲಿ ವ್ಯಕ್ತಿಯೊಬ್ಬರು ವಾಷಿಂಗ್ ಮಷಿನ್ ಖರೀದಿಸಿದ್ದಾರೆ. ವಾಷಿಂಗ್ ಮಷಿನ್ (washing machine) ಮನೆಗೆ ಫಿಟ್ ಮಾಡೋದಕ್ಕಿದೆ 300 ರೂ.ಗಳನ್ನು ನೀಡುತ್ತೇನೆ ಎಂದು ಹೇಳಿ ಇಬ್ಬರು ಮಕ್ಕಳನ್ನು (ಆಪ್ರಾಪ್ತರು) ಆತ ಕರೆದುಕೊಂಡು ಹೋಗಿದ್ದಾನೆ.
ದಾರಿಯಲ್ಲಿ ಆ ವ್ಯಕ್ತಿ ತರಕಾರಿ ಅಂಗಡಿಗೆ ಹೋದನು. 4 ಕೆಜಿ ಟೊಮೆಟೊ ಖರೀದಿಸಿದನು. ನಂತರ ಇನ್ನೂ 10 ಕಿಲೋ ಟೊಮೆಟೋ ಖರೀದಿಸಬೇಕೆಂದಿದ್ದೆ ಆದರೆ ಈಗ ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದಾನೆ. ಈತನ ಮಾತು ಸತ್ಯ ಇರಬಹುದು ಎಂದು ತರಕಾರಿ ಮಾರಾಟಗಾರ ಆ ಮಾತುಗಳನ್ನು ನಂಬಿದ್ದಾನೆ.
ಅಂಗಡಿಯಾತ ತನ್ನ ಮಾತು ನಂಬಿದ್ದಾನೆ ಎಂದು ಖಚಿತಪಡಿಸಿಕೊಂಡ ಆ ವ್ಯಕ್ತಿ ನಾಲ್ಕು ಕೆಜಿ ಟೊಮೆಟೊ ತೆಗೆದುಕೊಂಡು ನಾನು ಬರುವರೆಗೂ ಈ ಮಕ್ಕಳು ನಿನ್ನ ಹತ್ತಿರವೇ ಇರಲಿ ಎಂದು ವ್ಯಾಪಾರಿಯಲ್ಲಿ ಹೇಳಿದ್ದಾನೆ. ವ್ಯಕ್ತಿಯ ಮಕ್ಕಳು ತನ್ನ ಬಳಿ ಇದ್ದಾರಲ್ಲ. ಆತ ಮರಳಿ ಬರಬಹುದು ಎಂದು ನಂಬಿದ್ದ ವ್ಯಾಪಾರಿ ಮೋಸ ಹೋಗಿದ್ದ.
ಹೌದು, ಟೊಮೆಟೊಗಳನ್ನು ತೆಗೆದುಕೊಂಡು ಹೋದಾತ ಎಷ್ಟು ಹೊತ್ತಾದರೂ ವಾಪಸ್ ಬರಲೇ ಇಲ್ಲ. ಆಗ ವ್ಯಾಪಾರಿಗೆ ಅನುಮಾನ ಶುರುವಾಗಿ, ನಿಮ್ಮ ತಂದೆ ಇನ್ನೂ ಏಕೆ ಬಂದಿಲ್ಲ? ಎಂದು ಇಬ್ಬರು ಮಕ್ಕಳಲ್ಲಿ ಕೇಳಿದರು. ಆಗ ಇಬ್ಬರು ಮಕ್ಕಳು ಅವರು ನಮ್ಮ ತಂದೆಯಲ್ಲ, ಅವರು ಯಾರೆಂದು ನಮಗೆ ಗೊತ್ತೇಇಲ್ಲ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಆಘಾತಕ್ಕೊಳಗಾದ ವ್ಯಾಪಾರಿಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಇದನ್ನು ಓದಿ: Diploma Common Entrance Test: ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
