Home » Falaknuma Express Train: ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರಿ ಬೆಂಕಿ: 3 ಬೋಗಿಗಳು ಸುಟ್ಟು ಕರಕಲು

Falaknuma Express Train: ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರಿ ಬೆಂಕಿ: 3 ಬೋಗಿಗಳು ಸುಟ್ಟು ಕರಕಲು

0 comments
Falaknuma Express Train

Falaknuma Express Train: ಫಲಕ್ನುಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ (Falaknuma Express Train) ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ಇಂದು ನಡೆದಿದೆ. ತೆಲಂಗಾಣದ ಫಲಕ್ನುಮಾ ಎಕ್ಸ್‌ಪ್ರೆಸ್ ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲಾ ಪ್ರಯಾಣಿಕರು ಕೆಳಗಿಳಿದಿದ್ದಾರೆ ಹಾಗೂ‌ ಯಾವುದೇ ಪ್ರಯಾಣಿಕರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ದಕ್ಷಿಣ ಮಧ್ಯ ರೈಲ್ವೆಯ ಸಿಪಿಆರ್‌ಒ(CPRO South Central railway) ಸಿಎಚ್ ರಾಕೇಶ್ (CH Rakesh) ತಿಳಿಸಿದ್ದಾರೆ.

ಯಾದಾದ್ರಿ ಭುವನಗಿರಿ ಜಿಲ್ಲೆಯ ಪಗಿಡಿಪಲ್ಲಿ ಮತ್ತು ಬೊಮ್ಮಾಯಿಪಲ್ಲಿ ನಡುವೆ ಈ ಅಗ್ನಿ ಅವಘಡ ಸಂಭವಿಸಿತು. S4, S5, S6 ಎಂಬ ಮೂರು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ತಕ್ಷಣ ಸಿಬ್ಬಂದಿ ರೈಲು ನಿಲ್ಲಿಸಿ ಎರಡೂ ಬೋಗಿಗಳಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಯಾವುದೇ ಪ್ರಯಾಣಿಕರಿಗೂ ಪ್ರಾಣಹಾನಿಯಾಗಿಲ್ಲ . ಬೆಂಕಿ ಅನಾಹುತ ಸಂಭವಿಸಿದ ತಕ್ಷಣವೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

 

ಇದನ್ನು ಓದಿ: 7th pay commission: 7ನೇ ವೇತನ ಸಮಿತಿ ಜಾರಿ ಅಸ್ಥಿರತೆಯಲ್ಲಿ, ಸಿಎಂ ಹೇಳಿಕೆಯಿಂದ ಸರ್ಕಾರಿ ನೌಕರರಿಗೆ ಭಾರೀ ನಿರಾಸೆ 

You may also like

Leave a Comment