Free Tomato offer: ಟೊಮ್ಯಾಟೋ(Tomato) ಬೆಲೆ ಗಗನಕ್ಕೇರುತ್ತಿರುವುದು ರಾಷ್ಟ್ರವ್ಯಾಪಿ ಆತಂಕಕ್ಕೆ ಕಾರಣವಾಗಿದ್ದು, ಟೊಮ್ಯಾಟೋ ಬೆಲೆಯು ಭಾರತೀಯ ಅಡುಗೆಮನೆಗಳ(Indian kitchen) ಮೇಲೆ ತೀವ್ರ ಪರಿಣಾಮ ಬೀರಿದೆ ಮತ್ತು ಗ್ರಾಹಕರ ಜೇಬನ್ನು ಸುಡುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಟೊಮ್ಯಾಟೊ ಬೆಲೆಗಳು ಕೆಜಿಗೆ 250 ರೂ.ಗೆ ತಲುಪಿದ್ದು ಕೊಳ್ಳುವ ಜನರಿಗೆ ಬರೆ ಎಳೆದಂತಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಟೊಮೇಟೊ ಬೆಲೆಯೂ ಕುಸಿತ ಕಂಡಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ದೇಶದ ಕೆಲವೆಡೆ ರಿಯಾಯಿತಿ ದರದಲ್ಲಿ ಟೊಮೇಟೊ ಮಾರಾಟವಾಗುತ್ತಿದೆ. ಇದೆಲ್ಲದರ ನಡುವೆ ಚಂಡೀಗಢದಲ್ಲಿ ಆಟೋ ಚಾಲಕನೊಬ್ಬ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದ್ದಾನೆ. ಯಾವುದೀ ಆಫರ್ ಅಂತೀರಾ?…ಅದೇ,ದೇಶದಾದ್ಯಂತ ಟಾಪ್ ಪ್ರಿಯಾರಿಟಿ ಪಡೆದಿರುವ ‘ಟೊಮೆಟೊದ ಆಫರ್’ ಅನ್ನು ನೀಡಿದ್ದಾನೆ. ತನ್ನ ಆಟೋ ಹತ್ತಿದರೆ ಉಚಿತವಾಗಿ ಟೊಮೇಟೊ ನೀಡುವುದಾಗಿ ಹೊಸ ಆಫರ್( Free Tomato offer) ಘೋಷಿಸಿದ್ದಾನೆ.

image Source : India today
ಟೊಮೆಟೊ ಟ್ರೆಂಡ್ (Tomato trend) ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅದೇ ರೀತಿ ಆಟೋ ಚಾಲಕರೊಬ್ಬರು, ಗ್ರಾಹಕರನ್ನು ಸೆಳೆಯಲು ಟೊಮೇಟೊ ಆಫರ್ (Tomato offer) ನೀಡುವುದಾಗಿ ಘೋಷಿಸಿದ್ದಾರೆ. ಪಂಜಾಬ್‌ನ ಚಂಡೀಗಢ (Chandigarh) ಮೂಲದ ಅರುಣ್ ತಮ್ಮ ಆಟೋದಲ್ಲಿ ಪ್ರಯಾಣಿಸಿದ್ರೆ 1ಕೆಜಿ ಟೊಮೇಟೊವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾನೆ.
ಈ ವಿಶೇಷ ರಿಯಾಯಿತಿಯನ್ನು ಘೋಷಿಸಿದ ಆಟೋ ಚಾಲಕ ಅರುಣ್ (Auto driver Arun) ಸುಮಾರು 12 ವರ್ಷಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ ಇವರು ಈ ಆಫರ್ ನ ಫ್ಲೆಕ್ಸ್ ಮಾಡಿ ಆಟೋ ಹಿಂದೆ ಅಳವಡಿಸಿದ್ದಾರೆ. ತಮ್ಮ ಆಟೋದಲ್ಲಿ ಪ್ರಯಾಣಿಸುವ ಗ್ರಾಹಕರಿಗೆ ಉಚಿತವಾಗಿ ಕೆಜಿಗಟ್ಟಲೇ ಟೊಮೇಟೊ ನೀಡುತ್ತೇನೆಂದು ಹೇಳಿದ್ದಾರೆ. ಆದರೆ ಉಚಿತ ಟೊಮೆಟೊ ಪಡೆಯಲು ಕೆಲವೊಂದು ಕಂಡಿಶನ್ (Condition) ಹಾಕಿದ್ದಾರೆ.
ಫ್ರೀ ಟೊಮೇಟೊ ಪಡೆಯಲು ಗ್ರಾಹಕರು ಕೆಲವೊಂದು ಷರತ್ತುಗಳನ್ನು ಪಾಲಿಸಬೇಕು. ಆಟೋದಲ್ಲಿ ಕನಿಷ್ಠ 5 ಬಾರಿ ಪ್ರಯಾಣಿಸಿದವರಿಗೆ ಮಾತ್ರ ಈ ಉಚಿತ ಟೊಮೇಟೊ ನೀಡುವುದಾಗಿ ಅರುಣ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅರುಣ್, ‘ನನ್ನ ಜೀವನದ ಆದಾಯದ ಮೂಲ ಆಟೋ. ಇದರಿಂದಲೇ ನಾನು ಮತ್ತು ನನ್ನ ಕುಟುಂಬ ಬದುಕಬೇಕಿದೆ. ನನ್ನ ಕೈಲಾದಷ್ಟು ಬಡವರ ಸೇವೆ ಮಾಡಬೇಕೆಂಬುದು ನನ್ನ ಮಹದಾಸೆ. ಹೀಗಾಗಿಯೇ ಈ ವಿಶೇಷ ಘೋಷಣೆ ಮಾಡಿದ್ದೇನೆ, ಅಂತಾ ಹೇಳಿದ್ದಾರೆ.
ಅರುಣ್ ಉಚಿತ ಟೊಮೇಟೊ ಮಾತ್ರವಲ್ಲ, ತಮ್ಮ ಆಟೋದಲ್ಲಿ ಭಾರತೀಯ ಸೈನಿಕರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಇದಲ್ಲದೆ ಅಪಘಾತಕ್ಕೆ ತುತ್ತಾದವರಿಗೂ ಆಟೋದಲ್ಲಿ ಉಚಿತ ಪ್ರಯಾಣ ಒದಗಿಸುತ್ತಿದ್ದಾರೆ. ಇಂತಹ ಜನ ಸೇವಾ ಕಾರ್ಯಗಳನ್ನು ಆಟೋ ಚಾಲಕ ಅರುಣ್ ಮಾಡುತ್ತಿದ್ದಾರೆ.
ಇದನ್ನು ಓದಿ: Tomato Price: ಟೊಮೆಟೊ ಮಾರಲು ಖುದ್ದಾಗಿ ಇಳಿದ ಸರ್ಕಾರ, ಇಂದಿನಿಂದ ಟೊಮೆಟೊ ಭಾರೀ ಅಗ್ಗ !
