Home » Good News To Fisherman: ರಾಜ್ಯದ ಮೀನುಗಾರರೇ ಇತ್ತ ಗಮನಿಸಿ, ಸಿಗಲಿದೆ ಸಬ್ಸಿಡಿ ದರದಲ್ಲಿ ಪೆಟ್ರೋಲ್!!!

Good News To Fisherman: ರಾಜ್ಯದ ಮೀನುಗಾರರೇ ಇತ್ತ ಗಮನಿಸಿ, ಸಿಗಲಿದೆ ಸಬ್ಸಿಡಿ ದರದಲ್ಲಿ ಪೆಟ್ರೋಲ್!!!

0 comments
Good News To Fisherman

Good News To Fisherman : ರಾಜ್ಯದ ಮೀನುಗಾರರಿಗೆ (Good News To Fisherman) ಭರ್ಜರಿ ಸಿಹಿಸುದ್ಧಿ ಇಲ್ಲಿದೆ. ರಾಜ್ಯ ಸರ್ಕಾರ ಮೋಟಾರ್ ಬೋಟ್ ಗಳಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಸೀಮೆ ಎಣ್ಣೆಯಿಂದ ಪೆಟ್ರೋಲ್ ಯಂತ್ರಕ್ಕೆ ಬದಲಾಯಿಸುವ ಮೀನುಗಾರರಿಗೆ ರಾಜ್ಯ ಸರಕಾರ 50 ಸಾವಿರ ರೂ.
ಸಬ್ಸಿಡಿ ಘೋಷಣೆ ಮಾಡಿದೆ. ಇದೀಗ ಸರ್ಕಾರ ನುಡಿದಂತೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಮೀನುಗಾರರಿಗೆ ಡೀಸೆಲ್ ಕೊಡುವ ರೀತಿ, ಸಬ್ಸಿಡಿ ದರದಲ್ಲಿ ಪೆಟ್ರೋಲ್ ಕೂಡ ಕೊಡಬೇಕು ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಯಂತ್ರ ಬದಲಾವಣೆಗಾಗಿ ಮೀನುಗಾರರಿಗೆ ತಲಾ 50 ಸಾವಿರ ರೂ. ಸಬ್ಸಿಡಿ ಕೊಡುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅದಕ್ಕಾಗಿ ರಾಜ್ಯ ಸರಕಾರ ಈಗಾಗಲೇ 20 ಕೋಟಿ ರೂ. ಮೀಸಲಿಟ್ಟಿದೆ. ಎಷ್ಟೇ ಫಲಾನುಭವಿಗಳಿದ್ದರೂ ಅವರೆಲ್ಲರಿಗೂ ಸಬ್ಸಿಡಿ ಕೊಡುತ್ತೇವೆ ಎಂದು ಮೀನುಗಾರಿಕೆ ಸಚಿವರು ಹೇಳಿದರು.

ಸೀಮೆ ಎಣ್ಣೆಯಿಂದ ಪೆಟ್ರೋಲ್‌ ಯಂತ್ರಕ್ಕೆ ಬದಲಾಯಿಸುವ ಮೀನುಗಾರರಿಗೆ 50 ಸಾವಿರ ಸಬ್ಸಿಡಿ ಕೊಟ್ಟೇ ಕೊಡುತ್ತೇವೆ. ಅದರ ಜತೆಗೆ ಮೀನುಗಾರರಿಗೆ ಮೀನುಗಾರಿಕೆ ಉದ್ದೇಶಕ್ಕೆ ಪೆಟ್ರೋಲ್‌ ಕೂಡ ಸಬ್ಸಿಡಿ ದರದಲ್ಲಿ ಕೊಡಬಹುದೇ ಎನ್ನುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಇದಿನ್ನೂ ಚರ್ಚೆ ಹಂತದಲ್ಲಿದೆ ಎಂದು ಹೇಳಿದ್ದಾರೆ.

 

ಇದನ್ನು ಓದಿ: Madhya pradesh women murder: ಮಹಿಳೆಯೋರ್ವಳ ಭೀಭತ್ಸ್ಯ ಕೃತ್ಯ; ದೇಹದ ಎಲ್ಲಾ ಭಾಗ ಸುಲಿದು ಬಿಟ್ಟ ದುಷ್ಕರ್ಮಿಗಳು! 

You may also like

Leave a Comment