Harrassment Case: ಶಿಕ್ಷಕನೋರ್ವ ವಿದ್ಯಾರ್ಥಿಯ ತಾಯಿಗೆ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ (tumkur) ಮಠವೊಂದಕ್ಕೆ ಸೇರಿದ ಶಾಲೆಯ ಶಿಕ್ಷಕ ಮಲ್ಲಾರಾಧ್ಯ ಎಂಬಾತ ಕಿರುಕುಳ (Harrassment Case) ನೀಡಿದ ವ್ಯಕ್ತಿ ಎನ್ನಲಾಗಿದೆ.
ಇಲ್ಲಿನ ಮಠದ ಶಾಲೆಯಲ್ಲಿ ಮಹಿಳೆಯ ಮಗ ಓದುತ್ತಿದ್ದನು. ಶಿಕ್ಷಣದ ಉದ್ದೇಶದಿಂದ ಶಾಲೆಗೆ ಕೊಟ್ಟಿದ್ದ ಮಹಿಳೆಯ ಫೋನ್ ನಂಬರ್ ಅನ್ನು ಶಿಕ್ಷಕ ಮಲ್ಲಾರಾಧ್ಯ ದುರುದ್ದೇಶಕ್ಕೆ ಬಳಸಿಕೊಂಡಿದ್ದಾನೆ. ಮಹಿಳೆಯ ಮೊಬೈಲ್ ಗೆ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿಕ್ಷಕ ತನಗೆ ಅವಾಚ್ಯ ಹಾಗೂ ಅಸಹ್ಯವಾದ ಲೈಂಗಿಕ ಉದ್ದೇಶದ ಸಂದೇಶ ಕಳುಹಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ,
ಮಹಿಳೆ ಲೈಂಗಿಕವಾಗಿ ಸಹಕರಿಸದಿದ್ದರೆ ಮಗನನ್ನು ಫೇಲ್ ಮಾಡುವುದಾಗಿ, ಆತನ ಭವಿಷ್ಯ ಹಾಳು ಮಾಡುವುದಾಗಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನನ್ವಯ ಪೊಲೀಸರು ಶಿಕ್ಷಕನ ಮೇಲೆ ಎಫ್‌ಐಆರ್ ದಾಖಲು ದಾಖಲಿಸಿದ್ದಾರೆ. ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಆರೋಪದಡಿ ಐಪಿಸಿ ಸೆಕ್ಷನ್ 1860 (U/s-354(A) 506) ಅಡಿಯಲ್ಲಿ ಶಿಕ್ಷಕನ ಮೇಲೆ ದೂರು ದಾಖಲಾಗಿದೆ.
